
ತೀರ್ಥಹಳ್ಳಿ : ರಂಜದಕಟ್ಟೆಯ ಸಮೀಪ ನಿನ್ನೆ ಮಧ್ಯಾಹ್ನ ಗೂಡ್ಸ್ ವಾಹನವನ್ನು ನಿಲ್ಲಿಸಿ ನಮಾಜ್ ಗೆ ತೆರಳಿದ್ದ ಹೊನ್ನಾಳಿ ಮೂಲದ ಗುಜರಿ ವ್ಯಾಪಾರ ಮಾಡುವ ಮಾಲಿಕ ಹಾಗೂ ಡ್ರೈವರ್ ವಾಹನ ನಿಲ್ಲಿಸಿ ನಂತರ ನಮಾಜ್ ಗೆ ಹೋಗಿದ್ದನ್ನು ನೋಡಿ ಇವರ ಗೂಡ್ಸ್ ವಾಹನವನ್ನು ತೆಗೆದುಕೊಂಡು ಹೋಗಿ ನಂತರ ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಗೂಡ್ಸ್ ವಾಹನವನ್ನು ಬಿಳಲುಕೊಪ್ಪ ಬಳಿ ಬಿಟ್ಟು ಪರಾರಿಯಾಗಿದ್ದರು,

ಬರೋಬ್ಬರಿ 30 ಲಕ್ಷ ಹಣ ಕಳವು ಮಾಡಲಾಗಿದೆ ಎಂದಾಗ ಪೊಲೀಸರ ಶೋಧ ಕಾರ್ಯ ಶುರುವಾಗಿತ್ತು.ಹಣ ಕಳವು ಆದ 12 ಗಂಟೆಯೊಳಗೆ ತೀರ್ಥಹಳ್ಳಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ ಲಕ್ಷಗಟ್ಟಲೆ ಹಣವನ್ನು ವಶಕ್ಕೆ ಪಡೆದಿರುವುದಲ್ಲದೇ ಪೊಲೀಸರು 5 ಜಿ ನೆಟ್ವರ್ಕ್ ಗಿಂತಲೂ ಸ್ಪೀಡ್ ಎಂದು ತೀರ್ಥಹಳ್ಳಿ ಪೊಲೀಸರು ತೋರಿಸಿಕೊಟ್ಟಿದ್ದಾರೆ

.ಕಾರ್ಯಾಚರಣೆ ಜಿಲ್ಲಾ ಅಧೀಕ್ಷಕರಾದ ಮಿಥುನ್ ಕುಮಾರ್ ನೇತೃತ್ವದಲ್ಲಿ ಡಿ ವೈ ಎಸ್ ಪಿ ಅರವಿಂದ್ ಕಲಗುಜ್ಜಿ, ಸಿ ಪಿ ಐ ಇಬ್ರಾನ್ಬೆಗ್ ಪಿ ಎಸ್ ಐ ಶಿವನಗೌಡ, ಲೋಕೆಶಪ್ಪ, ಲಿಂಗೇಗೌಡ, ರಾಜಶೇಖರ್, ರವಿ, ಪ್ರದೀಪ್, ದೀಪಕ್, ಸುರೇಶ್ ನಾಯ್ಕ್, ಪ್ರಮೋದ್, ಮಂಜುನಾಥ್, ರಾಘವೇಂದ್ರ ಸೇರಿ ಹಲವರು ಭಾಗಿಯಾಗಿದ್ದರು.


