Oplus_131072

ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹಗಗನಯಾತ್ರಿ ಬುಚ್ ವಿಲ್ಮೋರ್ ಇದೇ ತಿಂಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ವಾಪಸ್ ಭೂಮಿಗೆ ಬರುವುದು ಖಚಿತವಾಗಿದೆ ಎಂದು ನಾಸಾ ಮೂಲದಿಂದ ತಿಳಿದು ಬಂದಿದೆ.

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕಳೆದ 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದಾರೆ. ಈಗ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ತರಲು, ನಾಸಾ ಮತ್ತು ಸ್ಪೇಸ್‌ಎಕ್ಸ್ ಮಾರ್ಚ್ 14 ರಂದು ಫಾಲ್ಕನ್ 9 ರಾಕೆಟ್ ಮೂಲಕ ಕ್ರೂ-10 ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

ಈ ಕಾರ್ಯಾಚರಣೆಯ ಉಪಗ್ರಹದಲ್ಲೇ ಭೂಮಿಗೆ ಮತ್ತೆ ಮರಳಲಿದ್ದಾರೆ.ಇನ್ನು ಮಾ 19 ರಂದು ಬಾಹ್ಯಕಾಶದಿಂದ ಹೊರಡಲಿದ್ದು 3 ರಿಂದ 4 ದಿನದ ಒಳಗೆ ಭೂಮಿಗೆ ಮರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

One thought on “ಮತ್ತೆ ಭೂಮಿಗೆ ವಾಪಸಾಗಲಿದ್ದಾರೆ ಸುನೀತಾ ವಿಲಿಯಮ್ಸ್ ಅಂಡ್ ಟೀಮ್”

Leave a Reply

Your email address will not be published. Required fields are marked *