- ಆಗುಂಬೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು ತಂಡದವರ ಕಾರ್ಯಾಚರಣೆ
- ಒಂದೇ ತಿಂಗಳಲ್ಲಿ 3ಕೇಸ್
- ಸಂಚಾರ ನಿಯಮ ಮೀರುವ ವಾಹನ ಸವರರೇ ಎಚ್ಚರ
ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಆಗುಂಬೆ ಫಾರೆಸ್ಟ್ ಚೆಕೆಪೋಸ್ಟ್ ಹತ್ತಿರ ದಿನಾಂಕ 26/08/2024 ರಂದು ಪಿಎಸ್ಐ ರಂಗನಾಥ್ ಅಂತರಗಟ್ಟಿ, ಎ ಎಸ್ ಐ .ಉಮೇಶ್ , ಎ ಎಸ್ ಐ ವಾಸಪ್ಪ,ಸಂಜಯ್ ಬಾಬು,ರಮೇಶ್ ಅನಿಲ್ ರವರು ವಾಹನ ತಪಾಸಣೆ ಮಾಡುತ್ತಿದ್ದಾಗ ಇನ್ನೋವಾ ಕಾರು KA 05-AF-0250 ಚಾಲಕ ಮಹೇಶ್ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದು,ಪ್ರಕರಣ ದಾಖಲಿಸಿ ನ್ಯಾಯಲಯಕ್ಕೆ ವರದಿ ಮಾಡಿದ್ದ ಹಿನ್ನಲೆಯಲ್ಲಿ ದಿನಾಂಕ 227/08/24 ರಂದು ಪ್ರಥಮ ದರ್ಜೆ ವ್ಯವಹಾರಗಳ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ತೀರ್ಥಹಳ್ಳಿ ನ್ಯಾಯಲಯ ನ್ಯಾಯಾಧೀಶರು 10000 ರುಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ.ಇನ್ನೂ ಒಂದೇ ತಿಂಗಳಿನಲ್ಲಿ 3 ಕೇಸ್ ದಾಖಲಾಗಿದ್ದು,ಸಂಚಾರ ನಿಯಮ ಮೀರುವ ವಾಹನ ಸವರರಿಗೆ ಇನ್ನು ಕಠಿಣ ಕ್ರಮ ಜರುಗಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

