
ತೀರ್ಥಹಳ್ಳಿ : ಪ್ರತಿ ವರ್ಷದಂತೆ ಈ ವರ್ಷವೂ ಕುಂದಾದ್ರಿ ಪಾರ್ಶ್ವನಾಥ ದೇವಸ್ಥಾನದಲ್ಲಿ ಜನವರಿ 14 ರಂದು ನಡೆಯುವ ಮಕರ ಸಂಕ್ರಾಂತಿ ಜಾತ್ರೆಯ ಪ್ರಯುಕ್ತ ಈ ದಿನ 5-1-2025ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತೀರ್ಥಹಳ್ಳಿ ತಾಲ್ಲೂಕು ಯೋಜನಾಧಿಕಾರಿಗಳಾದ ಶ್ರೀಮತಿ ಮಾಲತಿ ದಿನೇಶ್ , ಪೂಜ್ಯಪಾದ ಚಿಕಿತ್ಸಾಲಯದ ವೈದ್ಯರಾದ ಡಾ.ಜೀವಂಧರ್ ಜೈನ್, ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಸೊಪ್ಪುಗುಡ್ಡೆ ರಾಘವೇಂದ್ರ, ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ ಅರುಣ್ ಗುಡ್ಡೇಕೇರಿ, ಸ್ವಯಂ ಪ್ರೇರಣಾ ಟ್ರಸ್ಟ್ (ರಿ) ಕಮ್ಮರಡಿ ಅಧ್ಯಕ್ಷರಾದ ನಿತ್ಯಾನಂದ ಎ ಜಿ, ಕಾರ್ಯದರ್ಶಿ ಸುಬ್ರಹ್ಮಣ್ಯ ಎಸ್,

ಆಗುಂಬೆ ವಲಯ ಮೇಲ್ವಿಚಾರಕರಾದ ಅಶೋಕ್ ರವರು, ಆಗುಂಬೆ ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರು, ಸೇವಾ ಪ್ರತಿನಿಧಿಗಳು, ಶೌರ್ಯ ತಂಡದ ಸದಸ್ಯರಗಳು, ದೇವಸ್ಥಾನ ಅರ್ಚಕರಾದ ಶಾಂತಿನಾಥ್ ರವರು ಹಾಗೂ ಸ್ಥಳೀಯ ಯುವಕ-ಯುವತಿಯರು ಉಪಸ್ಥಿತಿ ಇದ್ದು, 12 ನೇ ವರ್ಷದ ಸ್ವಚ್ಚತಾ ಕಾರ್ಯಕ್ಕೆ ಚಾಲನೆಯನ್ನು ನೀಡಿದರು. ಶ್ರೀ ಅಶೋಕ್ ರವರು ಎಲ್ಲರಿಗೂ ಸ್ವಾಗತಿಸಿದರು, ಶ್ರೀಮತಿ ನೇತ್ರಾವತಿ ಚಂದ್ರಹಾಸ್ ಎಲ್ಲರಿಗೂ ವಂದಿಸಿದರು. ಸೇವಾಪ್ರತಿನಿಧಿಗಳಾದ ಶ್ರೀಮತಿ ನೇತ್ರಾವತಿ, ಶ್ವೇತಾ, ಮೈತ್ರಿ, ಸೌಮ್ಯ, ಕಾವ್ಯ, ಶಕುಂತಲ,ರಾಮು,ಸುಧೀರ್ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.






