- ಶಾಲೆಗೆ ಎಲ್ಲೆಡೆ ಮೆಚ್ಚುಗೆ
- ಎಲ್ ಕೆ ಜಿ ಯಿಂದ 8 ನೇ ತರಗತಿಗಳಿಗೆ ಪ್ರವೇಶಾತಿ ಆರಂಭ

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶಾಲೆಗಳಲ್ಲಿ ಒಂದಾದ ಕಮ್ಮರಡಿಯ ವಿಶ್ವತಿರ್ಥ ಆಂಗ್ಲ &ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಸತತ 13ವರ್ಷಗಳಿಂದ ಶೇ 100ಫಲಿತಾಂಶ ದೊರಕಿದೆ ಅದರಂತೆ ಈ ವರ್ಷವೂ ಕೂಡ 100% ಫಲಿತಾಂಶ ದೊರೆತಿದ್ದು ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ.ಆಂಗ್ಲ ಮಾಧ್ಯಮದಲ್ಲಿ ಅದಿತಿ ಜೋಗಿ 607 ಅಂಕ ಪಡೆದು ಶಾಲೆಗೆ ಮೊದಲಿಗರಾಗಿದ್ದಾರೆ. ಇನ್ನು ಅನಿರುದ್ಧ 595ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ ತಂದು ಕೊಟ್ಟಿದ್ದಾರೆ. ಒಟ್ಟಾರೆ 25ಮಕ್ಕಳು ಪರೀಕ್ಷೆ ಬರೆದಿದ್ದು,11ಜನ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಹಾಗೂ 13 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಜೊತೆಗೆ 01 ದ್ವಿತೀಯ ಸ್ಥಾನ ಪಡೆದಿದ್ದಾರೆ.

ಶಾಲೆಯ ಹಿನ್ನಲೆ ಈ ಶಾಲೆಗೆ ಹಿಂದಿನಿಂದಲೂ ಒಳ್ಳೆ ಅಭಿಪ್ರಾಯ ಮೂಡಿ ಬಂದಿದೆ. ಅಳಿವಿನತ್ತ ಇದ್ದ ಶಾಲೆಯನ್ನು ಒಂದು ಮಾದರಿ ಶಾಲೆಯನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಹೆಚ್ಚಿದೆ. ಸದಾ ಮುಂಚೂಣಿಯಲ್ಲಿರುವ ವಿಶ್ವತೀರ್ಥ ಪ್ರೌಢಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಒಂದೊಳ್ಳೆ ಹಂತದಲ್ಲಿದ್ದಾರೆ.ಸತತವಾಗಿ 100%ಫಲಿತಾಂಶ ಬರುವಲ್ಲಿ ಶಾಲಾ ಬಳಗ, ಆಡಳಿತ ಮಂಡಳಿ, ಅಧ್ಯಕ್ಷರು ಸದಸ್ಯರ ಸಕ್ರಿಯವಾದ ಭಾಗವಹಿಸುವಿಕೆ ಇದಕ್ಕೆ ಕಾರಣ ಎನ್ನಬಹುದು.ಶಾಲೆಗೆ 100% ಫಲಿತಾಂಶ ಬಂದ ಹಿನ್ನಲೆ ಸಾರ್ವಜನಿಕರು ಹಾಗೂ ಪೋಷಕರು ಶಾಲೆಯ ಅಧ್ಯಕ್ಷರು ಸದಸ್ಯರಿಗೆ ಮುಖ್ಯಶಿಕ್ಷಕರಿಗೆ ಭೋದಕ ಮತ್ತು ಭೋದಕೇತರ ಸಿಬ್ಬಂದಿ ಮತ್ತು ಆಡಳಿತ ಮಂಡಳಿಗೆ ಅಭಿನಂದಿಸಿದ್ದಾರೆ.


