Month: January 2025

ಯಕ್ಷಗಾನದಲ್ಲೂ ಸೈ ಎನಿಸಿಕೊಂಡರು ನಟಿ ಉಮಾಶ್ರೀ

ಕನ್ನಡ ಸಿನಿಮಾ ರಂಗದ ಹಿರಿಯ ನಟಿ, ರಾಜಕಾರಣಿ ಉಮಾಶ್ರೀ ಸಿನಿಮಾ ನಟಿಯಾಗಿ, ಧಾರವಾಹಿಗಳಲ್ಲಿ ಅಭಿನಯಿಸಿ, ನಾಟಕಗಳಲ್ಲಿ ಬಣ್ಣಹಚ್ಚಿ ಪ್ರೇಕ್ಷಕರ ಮನಸಲ್ಲಿ ಜಾಗ ಪಡೆದಿದ್ದರು . ಇದೀಗ ಕರಾವಳಿಯ ಜನಪ್ರಿಯ ಜಾನಪದ ಕಲೆ ಯಕ್ಷಗಾನದಲ್ಲಿಯೂ ಪಾತ್ರ ನಿರ್ವಹಿಸಿ ಮಿಂಚಿದ್ದಾರೆ.ಹೊನ್ನಾವರದ ಪೆರ್ಡೂರು ಮೇಳದಿಂದ ಆಯೋಜಿಸಿದ್ದ…

ಭದ್ರಾವತಿಯ ಬಾರಂದೂರು ಬಳಿ ಭೀಕರ ಅಪಘಾತ- ಮೆಡಿಕಲ್ ವಿದ್ಯಾರ್ಥಿನಿ ಸಾ*ವು

ಶಿವಮೊಗ್ಗ: ಭದ್ರಾವತಿಯ ಬಾರಂದೂರು ಕ್ರಾಸ್ ಬಳಿ ಭೀಕರ ಅಫಘಾತ ನಡೆದಿದ್ದು, ಮೆಡಿಕಲ್ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಭದ್ರಾವತಿ ತಾಲೂಕಿನ ಬಾರಂದೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಟ್ರಾಕ್ಟರ್ ನಡುವೆ ಅಪಘಾತ ನಡೆದಿದ್ದು, ಓರ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.…

ನಾಟಿ ವೈದ್ಯ ರಾಘವೇಂದ್ರ ಬೋಬ್ಬಿ ರವರಿಗೆ ಕರ್ನಾಟಕ ರತ್ನ ಶ್ರೀ ಪ್ರಶಸ್ತಿ

ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ – ನಾಟಿ ಔಷಧಿ ನೀಡುವಲ್ಲಿ ರಾಘವೇಂದ್ರ ಬೋಬ್ಬಿ ರಾಜ್ಯದಲ್ಲೇ ಹೆಸರುವಾಸಿ ತೀರ್ಥಹಳ್ಳಿ : ಜ 13 ರಂದು ರವೀಂದ್ರ ಕಲಕ್ಷೇತ್ರದಲ್ಲಿ ನಡೆದ ಸಂಕ್ರಾಂತಿ ಉತ್ಸವದಲ್ಲಿ ನಾಡಿನ ಏಳಿಗೆಗಾಗಿ…

ಖೇಲ್‌ರತ್ನ ಗೌರವಕ್ಕೆ ಪಾತ್ರರಾದ ಮನು ಭಾಕರ್ ಮತ್ತು ಡಿ.ಗುಕೇಶ್!

ಮನು ಭಾಕರ್ ಮತ್ತು ಡಿ.ಗುಕೇಶ್ ಅವರು ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ .ಪ್ರತಿಷ್ಠಿತ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ರತ್ನ ಗೌರವಕ್ಕೆ ಪಾತ್ರರಾದರು. ರಾಷ್ಟ್ರಪತಿ ಭವನದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೀಡಿ…

ವಶಪಡಿಸಿಕೊಂಡಿದ್ದ 56 ಕೆಜಿ ಗಾಂಜಾ ನಾಶಪಡಿಸಿದ ಪೊಲೀಸರು!

ಶಿವಮೊಗ್ಗ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಒಟ್ಟು ೪೩ ಪ್ರಕರಣಗಳಲ್ಲಿ ವಶ ಪಡಿಸಿದ್ದ ಅಂದಾಜು ಮೌಲ್ಯ ೨೧,೮೪,೬೬೦ ರೂಗಳ ಒಟ್ಟು ೫೬ ಕೆಜಿ ೭೪೦ ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು,ಗುರುವಾರ ನಾಶಪಡಿಸಲಾಯಿತು .ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಮೆ||…

ಮಾಜಿ ಸಭಾಪತಿಗಳು, ಸಚಿವರಾದ ಕಾಗೋಡು ತಿಮ್ಮಪ್ಪರವರಿಗೆ ಗೌರವ ಡಾಕ್ಟಾರೆಟ್

ಶಿವಮೊಗ್ಗ : ಮಾಜಿ ಸಭಾಪತಿ ಹಾಗೂ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರಿಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಶಿವಮೊಗ್ಗ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ. ಕಾಗೋಡು ತಿಮ್ಮಪ್ಪನವರು ಹೋರಾಟ, ಶೋಷಿತರ ಪರ ಧ್ವನಿ, ನೇರ ಮಾತುಗಾರ,…

ನಟ ಶಿವಣ್ಣರಿಗೆ 6 ಆಪರೇಷನ್ 190 ಹೊಲಿಗೆ ಹಾಕಿದ್ದಾರೆ – ಮಧು ಬಂಗಾರಪ್ಪ ಮಾಹಿತಿ!

ನಟ ಶಿವರಾಜ್​ಕುಮಾರ್​ ಅವರು ಕ್ಯಾನ್ಸರ್​ಮುಕ್ತವಾಗಿದ್ದಾರೆ. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿಸಿದ್ದು ಸದ್ಯ ಕುಟುಂಬದ ಜೊತೆಗೆ ಪ್ರವಾಸದಲ್ಲಿದ್ದಾರೆ. ಏಕಕಾಲಕ್ಕೆ 6 ಆಪರೇಷನ್​ ನಡೆಯಿತು. ಕರುಳಿನ ಒಂದು ಭಾಗವನ್ನು ತೆಗೆದು, ಅದನ್ನೇ ಯೂರಿನ್ ಬ್ಲಾಡರ್ ಆಗಿ ಮಾಡುತ್ತಾರೆ. ಒಳಗಿನಿಂದ 190 ಹೊಲಿಗೆ ಹಾಕಲಾಗಿದೆ. ನಾವು…

ಮರದ ಹರೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಫಾರೆಸ್ಟ್ ಆಫೀಸ್ ಬಳಿ ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ಮರದ ಹರೆಯೊಂದು ತುಂಡಾಗಿ ಬಿದ್ದ ಪರಿಣಾಮ ಓರ್ವರಿಗೆ ಗಂಭೀರ ಗಾಯವಾಗಿದ್ದು ಇನ್ನೊಬ್ಬರಿಗೆ ಕಾಲು ಮೂಳೆ ಮುರಿದು ಹೋಗಿದೆ ಜೊತೆಗೆ ಕೈ ಮೂಳೆ ಮುರಿದಿದೆ. ಮೋಟಾರ್ ಮೆಕ್ಯನಿಕ್…

ತೀರ್ಥಹಳ್ಳಿ ಬೈಕ್ ನಡುವೆ ಡಿಕ್ಕಿ: ಓರ್ವ ಗಂಭೀರ

ಶಿವಮೊಗ್ಗ ,: ತೀರ್ಥಹಳ್ಳಿ ತಾಲೂಕಿನ ಬೇಗುವಳ್ಳಿ ಬಳಿ ಭೀಕರ ಅಪಘಾತ ನಡೆದಿದ್ದು ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿದ್ದು, ನಾಲ್ಕು ಮಂದಿಗೆ ಗಾಯಗಳಾಗಿದೆ.ಇದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ಲಭ್ಯವಾಗಿದೆ ಇಲ್ಲಿನ ಬೆಜ್ಜವಳ್ಳಿ ಜಾತ್ರೆಗೆ ಹೋಗಿ ವಾಪಸ್‌ ಆಗುತ್ತಿದ್ದ ವೇಳೆ ಮಂಡಗದ್ದೆ…

ಕುಂದಾದ್ರಿ ಗುಡ್ಡದ ಜಾತ್ರೆ ಸಡಗರ

ಶಿವಮೊಗ್ಗ :ಜಿಲ್ಲೆಯ ಸುಪ್ರಸಿದ್ದ ಪ್ರವಾಸಿ ತಾಣದಲ್ಲಿ ಒಂದಾದ ಕುಂದಾದ್ರಿ ಜೈನ ಮಂದಿರ ಒಂದು. ಮಕರ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಶ್ರೀ ಕುಂದಾದ್ರಿ ಕ್ಷೇತ್ರದಲ್ಲಿ ಜ 14 ರ ಮಂಗಳವಾರ ವಾರ್ಷಿಕ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಈ ಎಲ್ಲಾ ಕಾರ್ಯಕ್ರಮಗಳು ಸ್ವಸ್ತಿಶ್ರೀ…