Month: October 2025

ತೀರ್ಥಹಳ್ಳಿ | ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಅಸಾದಿ ಮುಂದೂಡಿಕೆ

ತೀರ್ಥಹಳ್ಳಿ : ತಾಲೂಕಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸ್ವಾಪಕ್ಷ ಹಾಗೂ ಕೆಲ ಸದಸ್ಯರಿಂದ ಅವಿಶ್ವಾಸ ನಿರ್ಣಯವಾದ ಹಿನ್ನೆಲೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು ಇದೀಗ ಹೈಕೋರ್ಟ್ ಸದ್ಯದ ಮಟ್ಟಿಗೆ ರೆಹಮತ್ ಉಲ್ಲ ಅಸಾದಿ ಅನಿರ್ದಿಷ್ಟಾವಧಿ ತನಕ ಅಧ್ಯಕ್ಷರಾಗಿ ಮುಂದುವರೆಯಲು ಹೈಕೋರ್ಟ್ ಸೂಚಿಸಿದೆ.…

ಬಾಲಣ್ಣ ಆನೆಯ ಕಿವಿಯನ್ನು ಕತ್ತರಿಸಿದ ವೈದ್ಯರು !

ಸಕ್ರೆಬೈಲು: ಸಕ್ರೆಬೈಲು ಆನೆ ಶಿಬಿರ ಆನೆಗಳಲ್ಲಿ ಒಂದಾದ ಬಾಲಣ್ಣ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಬಲಗಿವಿಯಲ್ಲಿ ಉಂಟಾಗಿದ್ದ ಗ್ಯಾಂಗ್ರಿನ್ ಸೋಂಕಿನಿಂದಾಗಿ ಆನೆಯ ಬಲ ಕಿವಿಯ ಭಾಗವನ್ನು ವೈದ್ಯರ ತಂಡವು ಕತ್ತರಿಸಿ ತೆಗೆದಿದೆ. ತೀವ್ರವಾಗಿ ಸೋಂಕಿಗೆ ಒಳಗಾಗಿದ್ದ ಬಾಲಣ್ಣ ಆನೆಯ ಬಲಗಿವಿ ಸಂಪೂರ್ಣವಾಗಿ ಕಪ್ಪಾಗಿ,…

ಹೊಸನಗರ| ಯೂಟ್ಯೂಬ್ ಜಾಹೀರಾತು ನಂಬಿ 49 ಲಕ್ಷ ಕಳೆದುಕೊಂಡ ಯುವತಿ!

ಹೊಸನಗರ: ಯೂಟ್ಯೂಬ್‌ನಲ್ಲಿ ಕಂಡ ‘ಹೆಚ್ಚು ಲಾಭಾಂಶ’ದ ಆಮಿಷ ನೀಡಿದ ಹೂಡಿಕೆ ಜಾಹೀರಾತನ್ನು ನಂಬಿ, ಹೊಸನಗರದ ಮಹಿಳೆಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು 49 ಲಕ್ಷ ರೂ.ಗೂ ಹೆಚ್ಚು ಮೊತ್ತ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಹಿನ್ನಲೆ :ಮಹಿಳೆ ಯೂಟ್ಯೂಬ್ ವೀಕ್ಷಿಸುವ…

ಮುಂದಿನ ತಿಂಗಳಿಂದ ಇಂದಿರಾ ಕಿಟ್ ವಿತರಣೆಗೆ ಸರ್ಕಾರ ಅಸ್ತು!

ರಾಜ್ಯದ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಮುಂದಿನ ತಿಂಗಳಲ್ಲಿ ಆಹಾರ ಧಾನ್ಯಗಳನ್ನು ಒಳಗೊಂಡ ಇಂದಿರಾ ಕಿಟ್ ವಿತರಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಚಿವ ಕೆ.ಹೆಚ್.ಮುನಿಯಪ್ಪ ಅವರು, ಅನ್ನಭಾಗ್ಯ ಯೋಜನೆಯಡಿ ಅರ್ಹ…

ಹೊಸೂರು ಗುಡ್ಡೇಕೇರಿ ಶಾಲೆಯ ಅಭಿವೃದ್ಧಿ ಹರಿಕಾರ ಮಂಜು ಬಾಬು ರಿಗೆ ಅಭಿನಂದನಾ ಸಮಾರಂಭ!

ತೀರ್ಥಹಳ್ಳಿ : ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ, ಶಾಲೆಯ ಮುಖ್ಯ ಶಿಕ್ಷಕರಾದ ಮಂಜುಬಾಬು ಎಚ್. ಪಿ. ಇವರಿಗೆ ಅಭಿನಂದನಾ ಕಾರ್ಯಕ್ರಮವನ್ನು ದಿನಾಂಕ 30-10-2025 ಗುರುವಾರದಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಶಾಲೆಯ ಹಿತೈಷಿಗಳು , ಊರಿನ ಗಣ್ಯರು , ಪೋಷಕರು , ಹಳೆಯ ವಿದ್ಯಾರ್ಥಿಗಳು,…

ತೀರ್ಥಹಳ್ಳಿ :ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳ ಸಭೆ!

ತೀರ್ಥಹಳ್ಳಿ: ತಾಲೂಕಿನ ಪ್ರವಾಸಿ ಮಂದಿರದಲ್ಲಿ ಅ. 25 ರಂದು ಜಯ ಕರ್ನಾಟಕ ಸಂಘಟನೆ ತೀರ್ಥಹಳ್ಳಿ ಘಟಕದ ಪ್ರಮುಖ ಪದಾಧಿಕಾರಿಗಳ ಸಭೆಯನ್ನು ನಡೆಸಲಾಯಿತು. ಪ್ರಮುಖವಾಗಿ ತಾಲೂಕಿನಲ್ಲಿ ಸಂಘಟನೆಯ ಸದಸ್ಯತ್ವ ಅಭಿಯಾನದ ವಿಚಾರ ಹಾಗೂ ಈ ವರ್ಷದಲ್ಲಿ ರಕ್ತದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ…

ಪೊಲೀಸ್ ಹಾಗೂ ಪಬ್ಲಿಕ್ ನಡುವೆ ಸೌಜನ್ಯದ  ವರ್ತನೆ ಹೇಗಿರಬೇಕು – ಪೊಲೀಸ್‌ ಮಹಾನಿರ್ದೇಶಕರಾದ ಡಾ.ಎಂ.ಎ. ಸಲೀಂರವರ ಮಾರ್ಗಸೂಚಿ ಏನು!

ಸಮಾಜದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಉತ್ತಮ ಅಭಿಪ್ರಾಯವನ್ನು ಮೂಡಿಸಲು, ಪೊಲೀಸ್ ಅಧಿಕಾರಿ / ಸಿಬ್ಬಂದಿಯವರುಗಳು ಕರ್ತವ್ಯ ನಿರ್ವಹಿಸುವಾಗ ಪಾರದರ್ಶಕತೆ, ಸೌಜನ್ಯದ ವರ್ತನೆ ಮತ್ತು ನಿಷ್ಠೆಯನ್ನು ಕಾಯ್ದುಕೊಳ್ಳುವ ಬಗ್ಗೆ ಪೊಲೀಸ್‌ ಮಹಾನಿರ್ದೇಶಕರಾದ ಡಾ.ಎಂ.ಎ. ಸಲೀಂ ಅವರು ತಮ್ಮ ಅಧೀನದ ಅಧಿಕಾರಿಗಳಿಗೆ ಮಾರ್ಗಸೂಚಿಯನ್ನು ಬಿಡುಗಡೆ…

ಆಗುಂಬೆ ಪೊಲೀಸ್ ಹಾಗೂ ಯುವಕನ ಹಲ್ಲೆ ಆರೋಪಕ್ಕೆ ಬಿಗ್ ಟ್ವಿಸ್ಟ್!

ತೀರ್ಥಹಳ್ಳಿ : ಆಗುಂಬೆ ಹೋಬಳಿಯ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾರ್ಡರಗದ್ದೆ ಯಲ್ಲಿ ಅಮಾಯಕ ಯುವಕನ ಮೇಲೆ ಆಗುಂಬೆ ಪೊಲೀಸರು ಹಲ್ಲೆ ನಡೆಸಿದ ಆರೋಪ ಸ್ಥಳೀಯರ ದೂರಿನ ಮೇಲೆ ಸತ್ಯಶೋಧ ಮಾಧ್ಯಮ ವರದಿ ಮಾಡಿದ್ದು,ಪೊಲೀಸರು ಸಮವಸ್ತ್ರ ಧರಿಸದೆ ಇದ್ದ ಹಿನ್ನಲೆ ಪೊಲೀಸರು…

ತೀರ್ಥಹಳ್ಳಿ : ಪಟಾಕಿ ಮಳಿಗೆಗೆ ಬೆಂಕಿ ಇಡುವುದಾಗಿ ಬೆದರಿಕೆ!

ದಲಿತ ಹುಡುಗನ ಮೇಲೆ ಹಲ್ಲೆ : ಚಿನ್ನ ಹಾಗೂ ನಗದು 1ಲಕ್ಷ ಕಳೆದಿದೆ ಹೊಣೆ ಯಾರು? ತೀರ್ಥಹಳ್ಳಿ : ತಾಲೂಕಿನ ಸಾರ್ವಜನಿಕ ಕ್ರೀಡಾಂಗಣದಲ್ಲಿ ಪಟಾಕಿ ಮಳಿಗೆ ಇಟ್ಟುಕೊಂಡಿದ್ದ ವ್ಯಾಪಾರಿಗಳು ಹಾಗೂ ಕೆಲಸಕ್ಕಿರುವ ದಲಿತ ಹುಡುಗನ ಮೇಲೆ ಕೆಲವು ರಾಜಕೀಯ ಮುಖಂಡ ಜೊತೆಗೆ…

ತೀರ್ಥಹಳ್ಳಿ : ಮೇಗರವಳ್ಳಿ ಬಳಿ ಕಾರು ಅಪಘಾತ!

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿಯ ಮೇಗರವಳ್ಳಿ ತಿರುವಿನಲ್ಲಿ ಕಾರೊಂದು ಅಪಘಾತಕ್ಕಿಡಾಗಿದ್ದ ಘಟನೆ ಅ. 23 ರ ಸಂಜೆ 5 ಗಂಟೆಗೆ ನಡೆದಿದೆ.ಶಿವಮೊಗ್ಗದಿಂದ ಮಂಗಳೂರು ಮಾರ್ಗವಾಗಿ ಚಲಿಸುತಿದ್ದ ಕಾರು ಮೇಗರವಳ್ಳಿ ತಿರುವಿನಲ್ಲಿ ಚಾಲಕನ ಹಿಡಿತಕ್ಕೆ ಸಿಗದೇ ಪಲ್ಟಿಯಾಗಿದ್ದು ನಾಲ್ಕು ಚಕ್ರ ಮೇಲಾಗಿ…