Month: December 2025

ಆಗುಂಬೆ ಭಾಗದಲ್ಲಿ ಕಾಡುಕೋಣ ಹಾವಳಿ!

ತಾಲೂಕಿನ ಆಗುಂಬೆ ಹೋಬಳಿ ಬಾಳೆಹಳ್ಳಿ ಗ್ರಾಮ ಹೊಸಕೇರಿಯ ಲೋಕಪ್ಪ ಗೌಡ ಎಂಬುವರ ಗದ್ದೆಗೆ ಕಾಡು ಕೋಣಗಳು ನುಗ್ಗಿ ಬತ್ತದ ಪಸಲು ಹಾಳು ಮಾಡಿದ್ದು ರೈತನಿಗೆ ಬಾರಿ ನಷ್ಟವಾಗಿದೆ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸದ್ಯ ಕಾಡು ಪ್ರಾಣಿಗಳ ಲೂಟಿ…

ತೀರ್ಥಹಳ್ಳಿ :ಪಟ್ಟಣ ಪಂಚಾಯಿತಿ ಪ್ರಭಾರ ಅಧ್ಯಕ್ಷರಾಗಿ ಗೀತಾ ರಮೇಶ್ ಅಧಿಕಾರ!

ತೀರ್ಥಹಳ್ಳಿ :ಪಟ್ಟಣ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಗೀತಾ ರಮೇಶ್ ಡಿ. 8 ರಂದು ಅಧಿಕಾರ ಸ್ವೀಕರಿಸಿದರು.ಈ ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಹಮತ್ ಉಲ್ಲಾ ಅಸಾದಿ ಅವರ ಸಮಯ ಮುಗಿದ ಹಿನ್ನಲೆ ಮುಂದಿನ ಅಧ್ಯಕ್ಷರ ಪ್ರಕ್ರಿಯೆ ನಡೆಯುವ ಮದ್ಯೆ ಎಳ್ಳಮಾವಾಸ್ಯೆ ಜಾತ್ರೆ…

ರಾಜ್ಯದಲ್ಲಿ ಮತ್ತೆ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ!

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಕಾರಣ ಡಿ. 11ರವರೆಗೂ ಕರ್ನಾಟಕದಲ್ಲಿ ವ್ಯಾಪಕ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.ಇನ್ನು ಬೆಂಗಳೂರು ಸೇರಿದಂತೆ ಹಲವೆಡೆ ಚಳಿ ಜಾಸ್ತಿಯಾಗಿದ್ದು,ವಯಸ್ಸಾದವರಲ್ಲಿ ಹಾಗೂ ಚಿಕ್ಕ ಮಕ್ಕಳಿಗೆ ಶೀತ ಜ್ವರ ಕಾಣಿಸುತಿದೆ. ಜೊತೆಗೆ ಬೆಳಗಾವಿ,…

ಮರಣ ಪ್ರಮಾಣಪತ್ರ ವಿಚಾರವಾಗಿ ಸುತ್ತೋಲೆ ಹೊರಡಿಸಿದ ಸರಕಾರ!

ಮರಣ ಪ್ರಮಾಣಪತ್ರ (MCCD) ವಿತರಣಾ ವ್ಯವಸ್ಥೆಯನ್ನು ಪಾರದರ್ಶಕವಾಗಿಮತ್ತು ಕ್ರಮಬದ್ಧವಾಗಿ ಅನುಷ್ಠಾನಗೊಳಿಸುವ ಕುರಿತು ಆರೋಗ್ಯ ಇಲಾಖೆ ಮೂಲಕ ಪ್ರಮುಖ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಪ್ರತಿ ಸಾವಿನ ನಿಖರ ಕಾರಣ ತಿಳಿಯುವ ಉದ್ದೇಶದಿಂದ ವೈದ್ಯಕೀಯ ಸಂಸ್ಥೆಗಳಲ್ಲಿನ ಸಾವುಗಳನ್ನು ಹೊರತುಪಡಿಸಿ…

ಶಿವಮೊಗ್ಗ : ಸ್ತ್ರೀ ರೋಗ ತಜ್ಞೆ ಡಾ ಜಯಶ್ರೀ ಹಾಗೂ ಮಗ ಆಕಾಶ್ ನೇಣಿಗೆ ಶರಣು!

ಶಿವಮೊಗ್ಗ : ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಹೊಮ್ಮರಡಿ (55) ಹಾಗೂ ಅವರ ಪುತ್ರ ಆಕಾಶ್ ಹೊಮ್ಮರಡಿ (34) ಇಲ್ಲಿನ ಅಶ್ವತ್ಥ ನಗರದ ಅವರ ನಿವಾಸದಲ್ಲಿ ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡಾ.ಜಯಶ್ರೀ ನೆಲ ಮಹಡಿಯ ಕೊಠಡಿಲ್ಲಿ ನೇಣು ಬಿಗಿದುಕೊಂಡಿದ್ದು,…

ಆಗುಂಬೆ ಪೊಲೀಸ್ ಠಾಣೆ ವತಿಯಿಂದ ತೆರೆದ ಬಾಗಿಲು ಕಾರ್ಯಕ್ರಮ

ಹೊನ್ನೇತಾಳು ಶಾಲೆ ಮಕ್ಕಳು ಪೊಲೀಸ್ ಠಾಣೆಗೆ ಬೇಟಿ ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಪೊಲೀಸ್ ಠಾಣೆಗೆ ಹೊನ್ನೇತಾಳು ಶಾಲೆ ಮಕ್ಕಳನ್ನು ಬರಮಾಡಿಕೊಂಡು ಪೊಲೀಸ್ ಠಾಣೆಯ ಕಾರ್ಯ ವೈಖರಿ, ಪೋಲೀಸರ ದೈನಂದಿನ ಕರ್ತವ್ಯಗಳು, ಪೊಲೀಸ್ ಠಾಣೆಯಲ್ಲಿ ಬಳಸುವ ಆಯುಧಗಳು, ಮಕ್ಕಳ ಹಕ್ಕುಗಳು, ಮಕ್ಕಳಿಗೆ…

ಪಾಠಶಾಲಾ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್

ಸಿನಿಮಾಗೆ ಅಕ್ಷನ್ ಕಟ್ ಹೇಳಿದ ಹೆದ್ದೂರು ಮಂಜುನಾಥ್ ಶೆಟ್ಟಿ – ಶಾಂತಪ್ಪನ ಪಾತ್ರದಲ್ಲಿ ಮಿಂಚಿದ ಮಳಲಿಕೊಪ್ಪ ಧರಣೇಶ್ ಶಿವಮೊಗ್ಗ :ಹೆದ್ದೂರು ಮಂಜುನಾಥ್ ಶೆಟ್ಟಿ ನಿರ್ದೇಶನದಲ್ಲಿ ಪಾಠ ಶಾಲಾ ಚಿತ್ರ ಮೂಡಿ ಬಂದಿದ್ದು, ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ,ಈ ಚಿತ್ರವು 1990ರ ದಶಕದಲ್ಲಿ…

ಶಿವಮೊಗ್ಗ : ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮ*ಹತ್ಯೆ!

ಶಿವಮೊಗ್ಗ : ನಗರದ ಪಶುವೈದ್ಯಕೀಯ ಕಾಲೇಜು ರಸ್ತೆಯಲ್ಲಿ ರೈಲಿಗೆ ತಲೆಕೊಟ್ಟು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.ಮೃತಪಟ್ಟ ವ್ಯಕ್ತಿಯನ್ನು ಈಶ್ವರ(30) ಎಂದು ಗುರುತಿಸಲಾಗಿದ್ದು, ಇವರು ಅಶೋಕನಗರ ನಿವಾಸಿಯಾಗಿದ್ದು, ಸರ್ಕಾರಿ ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.…