ದಿನಾಂಕ 30.09.2024 ರಂದು ಭದ್ರಾವತಿಯಲ್ಲಿ ಶಾಲಾಶಿಕ್ಷಣ ಇಲಾಖೆಯವರು ನಡೆಸಿದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಜಿಲ್ಲಾಮಟ್ಟದ ಕ್ರಿಕೆಟ್ ಆಯ್ಕೆಯಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಶಾಲೆಯ ಅನುಜ್ ( 9 ನೆಯ ತರಗತಿ), ಉತ್ಸವ್ ಗೌಡ (8 ನೆಯ ತರಗತಿ), ವರ್ಚಸ್ (8 ನೆಯ ತರಗತಿ) ಮತ್ತು ಪೂರ್ವ (7 ನೆಯ ತರಗತಿ) ಇವರು ಅತ್ಯುತ್ತಮವಾಗಿ ತಮ್ಮ ಆಟವನ್ನು ಪ್ರದರ್ಶಿಸಿ ಶೈಕ್ಷಣಿಕ ವಿಭಾಗವಾಗಿರುವ ಬೆಂಗಳೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಮಾರ್ಗದರ್ಶನವನ್ನು ನೀಡಿ, ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕರಿಸಿದ ಸಿಟಿ ಕ್ರಿಕೆಟ್ ಕ್ಲಬ್ ನ ಮುಖ್ಯಸ್ಥರಾದ ಶ್ರೀಯುತ ಅಬ್ದುಲ್ ಕಲಾಂ ಆಜಾದ್ ರವರಿಗೆ ಹಾಗೂ ತರಭೇತುದಾರರಾದ ಶ್ರೀ ಸುಬ್ರಹ್ಮಣ್ಯ ಇವರಿಗೆ ವಾಗ್ದೇವಿ ಬಳಗ ಅಭಿನಂದನೆ ಸಲ್ಲಿಸಿದೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ಅಭಿನಂದಿಸಿ ಮುಂದಿನ ಕ್ರೀಡೆಗೆ ಶುಭಹಾರೈಸಿದ್ದಾರೆ.







