• ವಯೋಸಹಜ ಖಾಯಿಲೆಯಿಂದ ಸಾವಿತ್ರಮ್ಮ ವಿಧಿವಶ

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿಯ ಪಣತ ಸತೀಶ್ ಅವರ ತಾಯಿ ಸಾವಿತ್ರಮ್ಮ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿದ್ದು ಕೊರೋನಾ ಸಮಯದಲ್ಲಿ ಪಾಸಿಟಿವ್ ಬಂದರು ತನ್ನ ಕ್ರಿಯಾಶೀಲ ಚಟುವಟಿಕೆ ಮೂಲಕ ಸಾವನ್ನೇ ಗೆದ್ದು ಬಂದಿದ್ದು ಈ ಸಂಬಂಧ ಸತ್ಯಶೋಧ ಮಾಧ್ಯಮ ಕೂಡ ವರದಿ ಮಾಡಿತ್ತು.100 ಜನ ತುಂಬು ಕುಟುಂಬ ಹೊಂದಿದ್ದ ಸಾವಿತ್ರಮ್ಮನವರು ಇದೀಗ ಮಗ ಪಣತ ಸತೀಶ್ ಸೊಸೆ ಆಶಾ ಹಾಗೂಅಣ್ಣಂದಿರು,ಅಕ್ಕಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.ಈ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸುರೇಶ್ ಗನವಳ್ಳಿ ಹಾಗೂ ಸತ್ಯಶೋಧ ಮಾಧ್ಯಮ ವಿನಂತಿಸಿದೆ.

Leave a Reply

Your email address will not be published. Required fields are marked *