- ಸುದ್ದಿ ಬಿತ್ತರಿಸದಂತೆ ನಿರ್ಬಂಧಕಾಜ್ಞೆ ತಂದಿದ್ಯಾಕೆ? – ಅರ್ಜಿಯಲ್ಲಿ ಏನಿದೆ ಲಿಂಕ್ ಬಳಸಿ ಓದಿ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕೆ ಈ ರಾಜ್ಯದೇಲ್ಲೆಡೆ ಸದ್ದು ಮಾಡುತ್ತಿರುವ ಬೆನ್ನಲೇ ಮಾಜಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಅವರ ಪುತ್ರ ಕೆ.ಇ. ಕಾಂತೇಶ್ ಸುದ್ದಿ ವಾಹಿನಿಗಳು, ಮುದ್ರಣ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ದ ಯಾವುದೇ ರೀತಿಯ ಮಾನಹಾನಿ ವರದಿ ಮಾಡದಂತೆ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ತಂದಿದ್ದಾರೆ.ಅರ್ಜಿಯಲ್ಲಿ ಏನಿದೆ?ಲೋಕಸಭೆ ಚುನಾವಣೆ ನಡೆಯುತ್ತಿರುವ ಈ ಸಮಯದಲ್ಲಿ ಕೆಲ ಮಾಧ್ಯಮಗಳು ನನ್ನ ಘನತೆ, ಗೌರವ ಮತ್ತು ಮಾನಹಾನಿ ಮಾಡಲು ಪ್ರಯತ್ನಿಸುತ್ತಿವೆ ಎಂಬ ಅನುಮಾನಗಳಿವೆ. ನನ್ನನ್ನೇ ನಕಲು ಮಾಡಿದ ಅಶ್ಲೀಲ ಪೋಟೊ, ವಿಡಿಯೊ ಮತ್ತು ಅಡಿಯೊಗಳನ್ನು ಪ್ರಸಾರ ಮಾಡಲು ಯತ್ನಿಸುತ್ತಿವೆ. ಒಂದೊಮ್ಮೆ ಅಂತಹ ಅಕ್ಷೇಪಾರ್ಹ ವಿಡಿಯೊ. ಫೋಟೊಗಳು ಪ್ರಸಾರಗೊಂಡರೆ ಅಥವಾ ಪ್ರಕಟವಾದರೆ ನನ್ನ ಮಾನಹಾನಿಯಾಗುತ್ತದೆ. ಆದ್ದರಿಂದ ಮಾಧ್ಯಮಗಳ ವಿರುದ್ಧ ಮಧ್ಯಂತರ ನಿರ್ಬಂಧಕಾಜ್ಞೆ ಆದೇಶ ನೀಡಬೇಕು’ ಎಂದು ಕಾಂತೇಶ್ ದಾವೆಯಲ್ಲಿ ಕೋರಿದ್ದಾರೆ.

