
ರಾಜ್ಯದಲ್ಲಿ ಎರಡನೇಯ ಕೊನೆಯ ಹಂತದ ಮತದಾನ ಮೇ 7 ರಂದು ನಡೆಯಲಿದ್ದು ಮೂರನೇ ಹಂತದ ಮತದಾನಕ್ಕಾಗಿ ಜನ ತಮ್ಮ ಸ್ವಂತ ಊರುಗಳಿಗೆ ತೆರಳಲಿದ್ದಾರೆ. ಇನ್ನು ಪ್ರಯಾಣಿಕರಿಗೆ ಅನುಕೂಲವಾಗುವಂತೆ ರಾಜ್ಯ ಸಾರಿಗೆ ನಿಗಮಗಳು ಹಲವು ಕ್ರಮಗಳನ್ನು ಕೈಗೊಂಡಿವೆ. ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ಮೆಜೆಸ್ಟಿಕ್‌ನಿಂದ ಹೆಚ್ಚುವರಿ ಬಸ್‌ಗಳನ್ನು ನಿಯೋಜಿದ್ದು ಹುಬ್ಬಳ್ಳಿ ಡಿಪೋದಿಂದಲೂ ಹೆಚ್ಚುವರಿ ಬಸ್ಸುಗಳು ಸಂಚಾರ ನಡೆಸಲಿವೆ. ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲುಬದಲಿ ಮಾರ್ಗದ ವ್ಯವಸ್ಥೆ ಮಡಿಕೊಂಡಿದ್ದು ಅದರ ಡಿಟೇಲ್ಸ್ ಇಲ್ಲಿದೆ.

ಮಾರ್ಗಗಳ ಮಾಹಿತಿ 1. ಜೆ.ಸಿ. ರಸ್ತೆ ಮತ್ತು ರಾಜಾರಾಮಮೋಹನ್ ರಾಯ್ ರಸ್ತೆ ಕಡೆಯಿಂದ ಮೈಸೂರು ಬ್ಯಾಂಕ್ ಮೂಲಕ ರಾಜಾಜಿನಗರಕ್ಕೆ ಹೋಗುವವರು ಬದಲಿ ಮಾರ್ಗವಾದ ಪ್ಯಾಲೇಸ್ ರಸ್ತೆ, ಚಾಲುಕ್ಯ ಸರ್ಕಲ್, ರೇಸ್ ಕೋರ್ಸ್ ರಸ್ತೆ ಮೂಲಕ ತೆರಳಬೇಕು.2) ರಾಜಾರಾಮಮೋಹನ್ ರಾಯ್ ರಸ್ತೆ ಮಾಗಡಿ ರಸ್ತೆಗೆ ಕಡೆಗೆ ಹೋಗುವವರು ಹಡ್ನನ್ ಸರ್ಕಲ್, ಕೆ.ಜಿ.ರಸ್ತೆಗೆ ಬರುವ ಬದಲು ಎನ್.ಆರ್. ವೃತ್ತ, ಟೌನ್ ವೃತ್ತ, ಮಾರ್ಕೆಟ್ ಸರ್ಕಲ್ ರಾಯನ್ ಸರ್ಕಲ್, ಸಿರ್ಸಿ ಸರ್ಕಲ್ ಮೂಲಕ ಮಾಗಡಿ ರಸ್ತೆಗೆ ಹೋಗಬೇಕು.



