- ವಿದ್ಯಾರ್ಥಿಗಳಿಗೆ ಅಭಿನಂದನೆಗಳು
- ಆಟಕ್ಕೂ ಫಸ್ಟ್ ಪಾಠಕ್ಕೂ ಫಸ್ಟ್

ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ತಾಲೂಕಿನ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಗೆ ಶೇ 95% ಫಲಿತಾಂಶ ಬಂದಿದ್ದುಜಿಲ್ಲೆಗೆ ಹೆಮ್ಮೆ ಪಡುವ ವಿಷಯವಾಗಿದೆ.

ಫಲಿತಾಂಶದಲ್ಲಿ ಹುಡುಗರೇ ಮೇಲುಗೈ
ಅಜಿತ್ 555/625 ಮೊಹಮದ್ ಅವೆಜ್ 554/625 ನಿತ್ಯಶ್ರೀ 524/625 ಹರ್ಷಿತ 517/625 ಶ್ರೇಯ 511 / 625 ಅಂಕ ಗಳಿಸಿದ್ದಾರೆ.
ಒಟ್ಟಾರೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು19,ಉತ್ತಿರ್ಣ 18,ಉನ್ನತ ಶ್ರೇಣಿ 02,ಪ್ರಥಮ ಶ್ರೇಣಿ 12,ದ್ವಿತೀಯ 02,ತೃತಿಯ 02 ಶ್ರೇಣಿಗಳ ಮೂಲಕ ಪಾಸ್ ಆಗಿದ್ದಾರೆ.ಇನ್ನು ಸ್ಕಂದ ಮತ್ತು ದ್ರುವ ಎಂಬ ಇಬ್ಬರು ವಿದ್ಯಾರ್ಥಿಗಳು ಅಂಗವಿಕಲರಾಗಿದ್ದು, SSLC ಪರೀಕ್ಷೆಯಲ್ಲಿ 9ನೇ ತರಗತಿ ಮಕ್ಕಳಾದ ನಿಶಾಂತ್ ಮತ್ತು ಉಜ್ವಲ್ ಸಹಾಯದಿಂದ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿ ಇತರರಿಗೆ ಮಾದರಿಯಾಗಿದ್ದಾರೆ.

ಇದೆ ವೇಳೆ ಉತ್ತಿರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ,ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಶಿಕ್ಷಕ ವೃಂದ ಅಭಿನಂದನೆ ತಿಳಿಸಿದ್ದಾರೆ.


