
ಭದ್ರಾವತಿಯವನು ಎನ್ನಲಾದ ಯುವಕನ್ನೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ನಿಶ್ಚಯಿಸಿ ಆಗುಂಬೆಗೆ ಬಂದಿರುವ ವಿಷಯ ಅರಿತ ಸ್ಥಳೀಯ ಯುವಕರು ನಮ್ಮ ಸುತ್ತಮುತ್ತ ಅನುಮಾನ ಬರುವ ಹಾಗೆ ಸಂಚರಿಸುತ್ತಿರುವರ ಬಗ್ಗೆ ಮಾಹಿತಿ ಕಳೆ ಹಾಕಿದಾಗ ಕುಂದಾದ್ರಿ ಬೆಟ್ಟದ ಪ್ರಪಾತಕ್ಕೆ ಅಭಿಮುಖವಾಗಿ ಯುವಕನೊಬ್ಬ ಕೂತಿರುವ ಬಗ್ಗೆ ದೇವಸ್ಥಾನದ ಅರ್ಚಕರಾದ ಶಾಂತಿನಾಥ್ ಭಟ್ರು ಗಮನಿಸಿ ಸ್ಥಳೀಯ ಯುವಕರಾದ ಸೌಕಿನ್ ಹಳ್ಳಿ ಬೈಲು, ಸಂಜು ನಾಬಳ, ಸೃಜನ್ ಹಂಡಿಗೆ,ಮಣಿಕಂಠ ,ಹರೀಶ್ ಜೋಗಿತೋಟ, ಸುಮಂತ್, ರಾಹುಲ್ ವಾರಳಿ ಬೆಟ್ಟಕ್ಕೆ ತೆರಳಿ ನಾಜೂಕಾಗಿ ಯುವಕನನ್ನು ರಕ್ಷಿಸಿ ಬೆಟ್ಟದಿಂದ ಕೆಳಗಿಳಿಸಿ ಪೋಷಕರಿಗೆ ಒಪ್ಪಿಸಿರುತ್ತಾರೆ. ಅರ್ಚಕರ ಮತ್ತು ಸ್ಥಳೀಯ ಯುವಕರ ಸಮಯ ಪ್ರಜ್ಞೆ ಮತ್ತು ಶೀಘ್ರ ಕಾರ್ಯಾಚರಣೆಗೆ ಯುವಕನ ಪೋಷಕರು ಧನ್ಯವಾದಗಳು ಅರ್ಪಿಸಿರುತ್ತಾರೆ.



