- ಹಲಸಿನ ಹಣ್ಣು ಕೀಳಲು ಹೋದಾಗ ಘಟನೆ

ಚಿಕ್ಕಮಗಳೂರು :ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಹಲಸಿನ ಹಣ್ಣು ಕುಯ್ಯಲು ತೆರಳುತ್ತಿದ್ದಾಗ ಅಲ್ಯುಮಿನಿಯಂ ಏಣಿ ವಿದ್ಯುತ್ ವೈರ್ ಗೆ ತಗುಲಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಗುಡ್ಡೇತೋಟದ ವಿಜಯಗೌಡ(56) ಮೃತ ದುರ್ದೈವಿ.ಮೃತರ ದೇಹದ ಬಹುತೇಕ ಭಾಗಗಳು ಬೆಂಕಿಯಲ್ಲಿ ಸುಟ್ಟು ಹೋಗಿದ್ದು, ಬರುತ್ತಿದ್ದ ಹೊಗೆಯನ್ನು ಗಮನಿಸಿದ ಸ್ಥಳೀಯರೊಬ್ಬರು ಮೆಸ್ಕ್ಕಾಂ ಸಿಬ್ಬಂಧಿಗೆ ಮಾಹಿತಿ ನೀಡಿದ್ದರು. ಘಟನೆಯ ಕುರಿತು ಮೃತರ ಪತ್ನಿ ಪ್ರಮೀಳ ಜಯಪುರ ಠಾಣೆಗೆ ದೂರು ನೀಡಿದ್ದು, ಪಿಎಸ್ಐ ಅಂಬರೀಶ್ ತನಿಖೆ ನಡೆಸುತ್ತಿದ್ದಾರೆ.
ವರದಿ :ಶಶಿ ಬೆತ್ತದ ಕೊಳಲು

ಸ್ವದಾಯೂ ಕೇಶ ತೈಲ ಒಂದು ತೈಲ ಹಲವಾರು ಪ್ರಯೋಜನ

