- ದಾವಣಗೆರೆಯಲ್ಲಿ ಅವಿತಿದ್ದ ವಿಶ್ವ ಅಲಿಯಾಸ್ ಗಿರೀಶ್ ಸೆರೆ
- ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹ

15ರ ಮುಂಜಾನೆ 5.30ಕ್ಕೆ ಮನೆಗೆ ನುಗ್ಗಿ ಅಂಜಲಿಗೆ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ. ಪೊಲೀಸರು ತೀವ್ರ ಶೋಧ ನಡೆಸಿ ವಿಶ್ವ ಅಲಿಯಾಸ್ ಗಿರೀಶ್ನನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿ ವಿಶ್ವ ವೃತಿಯಲ್ಲಿ ಕಳ್ಳ. ಪ್ರವೃತಿಯಲ್ಲಿ ಅಮಾಯಕ ಹೆಣ್ಣುಮಕ್ಕಳನ್ನು ಮೋಸ ಮಾಡುತ್ತಿದ್ದ. ಮದ್ಯವ್ಯಸನಿ ಚಟಕ್ಕೆ ಬಲಿಯಾಗಿ ಕಳ್ಳತನ ಮಾಡಿ ಹಲವು ಸಲ ಸಿಕ್ಕಿ ಹಾಕಿಕೊಂಡಿದ್ದ. ಹಂತಕನ ಪತ್ತೆಗೆ ಎರಡು ಪೊಲೀಸ್ ಟೀಮ್ ರಚನೆ ಮಾಡಿದ್ದು, ಒಂದು ತಂಡ ಮೈಸೂರು ಹಾಗೂ ಮತ್ತೊಂದು ತಂಡ ದಾವಣಗೆರೆಯಲ್ಲಿ ಹುಡುಕಾಟ ನಡೆಸುತ್ತಿತ್ತು. ಹತ್ಯೆ ಸ್ಥಳದ ಅಕ್ಕಪಕ್ಕದಲ್ಲಿನ ಮತ್ತು ಬಸ್ ನಿಲ್ದಾಣದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ವಿಶ್ವನ ಬಂಧನಕ್ಕೆ ಬಲೆ ಬೀಸಲಾಗಿತ್ತು ಇದೀಗ ಆರೋಪಿ ವಿಶ್ವ ಸಿಕ್ಕಿಬಿದ್ದಿದ್ದಾನೆ.ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಬಿಜೆಪಿಯ ಪ್ರಮುಖ ಮುಖಂಡರು ಇಲ್ಲಿನ ಶಹರ ಪೊಲೀಸ್ ಠಾಣೆಯ ಎದುರು ರಸ್ತೆಯಲ್ಲಿ ಕುಳಿತು, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ. ಅಂಜಲಿ ಅವರನ್ನು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಯನ್ನು ಕೂಡಲೇ ಬಂಧಿಸಿ, ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

