- ಬೆಂಕಿ ನಂದಿಸುವಲ್ಲಿ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ಹರ ಸಾಹಸ

ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಹೊನ್ನೇತಾಳು ಗ್ರಾಂ ಪಂ ವ್ಯಾಪ್ತಿಯ ಹುಂಚಿಕೊಪ್ಪದ ಶಿವಪ್ಪ ನಾಯ್ಕ್ ಅವರಿಗೆ ಸೇರಿದ ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ್ದು ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಹರ ಸಾಹಸ ಪಟ್ಟರು.ಸು 70 ಸಾವಿರ ಬೆಲೆ ಬಾಳುವ ಹುಲ್ಲು, ಪಾಕಾಸಿ , ತೊಲೆ, ಬೆಂಗಟೆ ಹಂಚು ಸಂಪೂರ್ಣ ಉರಿದು ಹೋಗಿದೆ.ಈ ವೇಳೆ ಗ್ರಾಮಸ್ಥರು ಪರಿಹಾರಕ್ಕೆ ಒಟ್ಟಾಯಿಸಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಗ್ರಾಮಸ್ಥರು, ಅಗ್ನಿಶಾಮಾಕ ಸಿಬ್ಬಂದಿ, ಕಂದಾಯ ಇಲಾಖೆ, ಅರಣ್ಯ ಇಲಾಖೆ ಸಿಬ್ಬಂದಿಗಳು ಇದ್ದರು.


