- ಕ್ಲಾಪ್ ಮಾಡಿ ಶುಭ ಹಾರೈಸಿದ ಕಿಮ್ಮನೆ
- ಮೊದಲ ಆಕ್ಷನ್ ಕಟ್ ಹೇಳಿದ ಆರ್ ಎಂ ಎಂ

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ನೆಲೆಸಿರುವ ಶ್ರೀ ರಾಮೇಶ್ವರ ದೇವರ ಸನ್ನಿಧಾನದಲ್ಲಿ ಮಂಜು ಹೆದ್ದೂರು ಅವರ ಚೊಚ್ಚಲ ಪಾಠಶಾಲಾ ಚಿತ್ರ ಮುಹೂರ್ತ ಅದ್ದೂರಿಯಾಗಿ ನೆರವೇರಿತು.ಮಲೆನಾಡಿನ ಹಲವು ಭಾಗಗಳಲ್ಲಿ ಚಿತ್ರೀಕರಣ ಆರಂಭವಾಗಲಿದ್ದು , ಮಕ್ಕಳು ಹಾಗೂ ಶಿಕ್ಷಕರ ನಡುವಿನ ಭಾಂದವ್ಯವೆ ಕತೆಯ ಹಂದರವಾಗಿದೆ.ಈ ಸಿನಿಮಾದಲ್ಲಿ ಮಲೆನಾಡ ಕಲಾವಿದರು ಹಾಗೂ 50ಕ್ಕೂ ಹೆಚ್ಚು ಮಕ್ಕಳು ಬಣ್ಣ ಹಚ್ಚಲಿದ್ದಾರೆ. ಜೊತೆಗೆ ಹಿರಿಯ ಕಲಾವಿದರಾದ ನಟನಾ ಪ್ರಶಾಂತ್, ಹಾಗೂ ಜೊತೆ ಜೊತೆಯಲ್ಲಿ ಖ್ಯಾತಿಯ ಕಿರಣ್ ನಾಯ್ಕ ಹಾಗೂ ಸ ರಿ ಗ ಮ ಖ್ಯಾತಿಯ ಕಂಬದ ರಂಗಯ್ಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕ್ಲಾಪ್ ಮಾಡಿ ಶುಭ ಹಾರೈಸಿದ ಕಿಮ್ಮನೆ
ಮಾಜಿ ಸಚಿವ ಕಿಮ್ಮನೆರತ್ನಾಕರ್ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದು, ಪಾಠಶಾಲಾ ಚಿತ್ರಕ್ಕೆ ಹಾಗೂ ನಿರ್ದೇಶಕ ಮಂಜು ಹೆದ್ದೂರ್ ಮನಸಾರೆ ಹಾರೈಸಿ ಕ್ಲಾಪ್ ಮಾಡಿದರು.
ಮೊದಲ ಆಕ್ಷನ್ ಕಟ್ ಹೇಳಿದ ಆರ್ ಎಂ ಎಂ
ಮಲೆನಾಡು ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ಮೊದಲ ಆಕ್ಷನ್ ಹೇಳಿ ಕ್ಯಾಮೆರಾ ಚಾಲನೆ ನೀಡುವುದರ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು.

ಈ ಚಲನಚಿತ್ರದ ಮುಹೂರ್ತಕ್ಕೆ ತುರ್ತು ಕೆಲಸದ ನಿಮಿತ್ತ ಆರಗಜ್ಞಾನೇಂದ್ರ ಗೈರಾಗಿದ್ದು ಕರೆ ಮೂಲಕ ಮಾತನಾಡಿ ಸಿನಿಮಾ ಸೆಟ್ ಗೆ ಬರುವೆ ಎಂದು ತಿಳಿಸಿ ಮುಹೂರ್ತ ಕ್ಕೆ ಶುಭ ಹಾರೈಸಿದರು. ಈ ವೇಳೆ ಡಿ ವೈ ಎಸ್ಪಿ ಗಜಾನನ ವಾಮನ ಸುತಾರ, ಅಮೃಪಾಲಿ ಸುರೇಶ್, ಸುಶೀಲಾ ಶೆಟ್ಟಿ ಸಹ್ಯಾದ್ರಿ ಗಣಪತಿ, ಉದ್ಯಮಿಗಳು, ಪಟ್ಟಣ ಪಂಚಾಯತ್, ಹಾಗೂ ಸ್ಥಳೀಯರು , ಪುಟಾಣಿ ಮಕ್ಕಳು ಪೋಷಕರು ಇದ್ದರು.



