• ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಭಕ್ತಗಣ

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂಗಾರು ಗ್ರಾಮದ ಹೊಸಪೇಟೆಯಲ್ಲಿ ನೆಲೆಸಿರುವ ಶ್ರೀ ಉಮಾಮಹೇಶ್ವರ ದೇವರ ವರ್ಧಂತಿ ಕಾರ್ಯಕ್ರಮ ಅದ್ದೂರಿಯಾಗಿ ಹೋಮ ಹವನ ಹಾಗೂ ಧಾರ್ಮಿಕ ಕೈಂಕಾರ್ಯಗಳೊಂದಿಗೆ ಸಾಂಗವಾಗಿ ನೆರವೇರಿತು.ಧರ್ಮೊತ್ತಾನ ಟ್ರಸ್ಟ್ ನ ಅಧ್ಯಕ್ಷರಾದ ರಾಜಶ್ರೀ ಡಾ ವಿ ಡಿ ವೀರೇಂದ್ರ ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ವೇ /ಬ್ರ ಸುಧೀಂದ್ರ ಭಟ್ ಹೆಬ್ಬಾಗಿಲು ಇವರ ನೇತೃತ್ವದಲ್ಲಿ ಮಂಗಳ ವಾದ್ಯದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.2014 ರಲ್ಲಿ ಸ್ಥಾಪನೆಗೊಂಡ ಸುಪ್ರಸಿದ್ದ ಶ್ರೀ ಉಮಮಹೇಶ್ವರ ದೇವರು.ಭಕ್ತರನ್ನು ಸಲಹುವ ದೇವರಾಗಿದ್ದು.ಮೇ .22 ಹಾಗೂ 23 ನೇ ತಾರೀಕು ಈ ಕಾರ್ಯಕ್ರಮ ನಡೆದಿದ್ದು, ದೇವಸ್ಥಾನದ ವರ್ಧಂತಿ ಕಾರ್ಯಕ್ರಮಕ್ಕೆ ಸಹಕರಿಸಿ ಯಶಸ್ವಿಗೆ ಕಾರಣರಾದ ದಾನಿಗಳು ಹಾಗೂ ಗ್ರಾಮಸ್ಥರಿಗೆ ದೇವಸ್ಥಾನ ಮಂಡಳಿಯ ಅಧ್ಯಕ್ಷರಾದ ಯೋಗೇಶ್ ಹೊಸಕೊಪ್ಪ ಧನ್ಯವಾದ ಅರ್ಪಿಸಿದ್ದಾರೆ.ಈ ವೇಳೆ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ, ಸದಸ್ಯರು ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *