- ಧಕ್ಷಿಣ ಭಾರತದ ಮೊದಲ ಮಹಿಳಾ ಅಧಿಕಾರಿಯಾಗಿ ಸೇವೆ ಸಲ್ಲಿಸಲಿದ್ದಾರೆ ಭವ್ಯ
- ರಾಜಕೀಯಕ್ಕೂ ಸೈ, ದೇಶ ಕಾಯುವುದಕ್ಕೂ ಸೈ

ಸತ್ಯಶೋಧ ನ್ಯೂಸ್ ಡೆಸ್ಕ್ : ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಈಗ ಸೇನಾ ಅಧಿಕಾರಿಯಾಗಿ ಆಯ್ಕೆಯಾಗಿದ್ದು,ಪ್ರಾದೇಶಿಕ ಸೇನೆಯಲ್ಲಿ ಕಮಿಷನ್‌ಡ್ ಆಫೀಸರ್ ಆಗಿ ನಿಯೋಜನೆಗೊಂಡಿದ್ದಾರೆ.ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಬಳಿಕ ಎಐಸಿಸಿ ರಾಷ್ಟ್ರೀಯ ಸಂಯೋಜಕಿ ಭವ್ಯ ನರಸಿಂಹ ಮೂರ್ತಿಯವರು ಭಾರತೀಯ ಸೇನೆಯಲ್ಲಿ ಕಮಿಷನಡ್ ಆಫೀಸರ್ ಆಗಿ ಆಯ್ಕೆಯಾಗಿದ್ದು ಕರ್ನಾಟಕ ಹೆಮ್ಮೆಯಾಗಿದ್ದು, ರಾಜ್ಯದ ಜನತೆ ದೇಶಕ್ಕೆ ಇವರ ಸೇವೆ ಉತ್ತಮವಾಗಿರಲೆಂದು ಶುಭ ಹಾರೈಸಿದ್ದಾರೆ.ಇನ್ನು ಭವ್ಯ ನರಸಿಂಹ ಮೂರ್ತಿಯವರು ಬೆಂಗಳೂರಿನವರಾಗಿದ್ದು ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಹಾಗೂ 2022 ಸಾಲಿನ ಪರೀಕ್ಷೆಯಲ್ಲಿ ಆಯ್ಕೆಯಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿಯಾಗಿದ್ದಾರೆ ಈ ವಿಷಯವಾಗಿ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಭವ್ಯ ನರಸಿಂಹ ಮೂರ್ತಿಯವರು ಇನ್ನು ಮುಂದೆ ನಾನು ದೇಶದ ಒಳಗೆ ರಾಜಕಾರಣಿಯಾಗಿ ನನ್ನ ಜನರ ಸೇವೆ ಸಲ್ಲಿಸುವುದರ ಜೊತೆಗೆ ಭಾರತೀಯ ಸೇನಾಧಿಕಾರಿಯಾಗಿ ದೇಶ ಕರೆದಾಗ ಗಡಿಯಲ್ಲಿ ರಕ್ಷಣೆ ಮಾಡಲೂ ಸಿದ್ಧಳಿದ್ದೇನೆ ನಿಮ್ಮೆಲ್ಲರ ಸಹಕಾರ ಸಲಹೆ ಅಗತ್ಯ ಎಂದು ಬರೆದುಕೊಂಡಿದ್ದಾರೆ.




