-ಜೆಡಿಯೆಸ್ ಮುಖಂಡರು ಕಟ್ಟೆ ಪ್ರವೀಣ್ ಹಾಗೂ ಎಂ ಮಂಜುನಾಥ್ ಗೌಡ ಅಭಿನಂದನೆ

ಶಿವಮೊಗ್ಗ :ಬೆಜೆಪಿ ಹಾಗೂ ಜೆಡಿಯೆಸ್ ಮೈತ್ರಿ ಅಭ್ಯರ್ಥಿ ಬಿ ವೈ ರಾಘವೇಂದ್ರ 2 ಲಕ್ಷ ಮತಗಳ ಅಂತರದಿಂದ ಪ್ರತಿ ಸ್ಪರ್ದಿ ಗೀತಾ ಶಿವರಾಜ್ ಕುಮಾರ್ ರನ್ನು ಸೋಲಿಸಿದ್ದಾರೆ.ಶಿವಮೊಗ್ಗ ಬಿಜೆಪಿ ಭದ್ರಕೋಟೆಯಾಗಿದ್ದು ರಾಘವೇಂದ್ರ ರ ಸಮಾಜಮುಖಿ ಕೆಲಸಗಳಾದ ಶಿವಮೊಗ್ಗ ವಿಮಾನ ನಿಲ್ದಾಣ, ರೈಲ್ವೆ ಅಭಿವೃದ್ಧಿ, ಗುಣಮಟ್ಟದ ರಸ್ತೆ ಕಾಮಗಾರಿ ಹಾಗೂ ಶಿವಮೊಗ್ಗ ಜಿಲ್ಲೆಯ ಜನರ ಸ್ನೇಹ ಸಂಪಾದಿಸಿರುವ ಅಭಿವೃದ್ಧಿ ಹರಿಕಾರನಿಗೆ ಮತದಾರ ಜೈ ಅಂದಿದ್ದು ರಾಘವೇಂದ್ರರ ಗೆಲುವಿಗೆ ಕಾರಣವಾಗಿದೆ.ಮಂಡ್ಯದಲ್ಲಿ ಹೆಚ್ ಡಿ ಕುಮಾರಸ್ವಾಮಿ ವಿಜಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ವಿರುದ್ಧ ಹೆಚ್‌ಡಿಕೆ 2,71,344 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯ ಕ್ಷೇತ್ರದಲ್ಲಿ ಒಕ್ಕಲಿಗರಿಬ್ಬರ ಮಧ್ಯೆಯೇ ಭಾರೀ ಪೈಪೋಟಿ ನಡೆದಿದ್ದು ವಿಶೇಷವಾಗಿತ್ತು.ಮಂಡ್ಯ ಜೆಡಿಎಸ್ ನ ಭದ್ರಕೋಟೆಯಾಗಿದ್ದು,ಕುಮಾರಸ್ವಾಮಿ ಅವರ ವರ್ಚಸ್ಸು,ಮೈತ್ರಿ ನಾಯಕರ ಸಾಂಘಿಕ ಹೋರಾಟ,ಒಕ್ಕಲಿಗರು ಸೇರಿದಂತೆ ಇತರೆ ವರ್ಗದವರು ಕೈ ಹಿಡಿದಿದ್ದು ಹೆಚ್ ಡಿ ಕೆ ಗೆಲ್ಲಲು ಮುಖ್ಯ ಕಾರಣಗಳಾಗಿವೆ.ಗೆಲುವು ಸಾಧಿಸುತ್ತಿದ್ದಂತೆ, ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.ಎಲ್ಲೆಲ್ಲೂ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.ಮೋದಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದೆ ಇದೇ ವೇಳೆ ಶಿವಮೊಗ್ಗ ಜಿಲ್ಲಾ ಜೆಡಿಎಸ್ ಮುಖಂಡರು ಹಾಗೂ ಕುಮಾರಣ್ಣನ ಆಪ್ತ ರು ಆದ ಕಟ್ಟೆ ಪ್ರವೀಣ್ ಹಾಗೂ ಭದ್ರಾವತಿ ಹೊಸಮನೆ ಜೆಡಿಯೆಸ್ ಮುಖಂಡರಾದ ಎಂ ಮಂಜುನಾಥ್ ಗೌಡ ಇವರು ತಮ್ಮ ನಾಯಕರಾದ ಹೆಚ್ ಡಿ ಕುಮಾರ ಸ್ವಾಮಿ ಹಾಗೂ ಶಿವಮೊಗ್ಗ ಮೈತ್ರಿ ಅಭ್ಯರ್ಥಿ ಬಿ ವೈ ರಾಘವೇಂದ್ರರಿಗೆ ಅಭಿನಂದನೆ ತಿಳಿಸಿದ್ದಾರೆ. ಜೊತೆಗೆ ಕಾರ್ಯಕರ್ತರಿಗೂ ಪಕ್ಷದ ಮುಖಂಡರಿಗೂ ಧನ್ಯವಾದ ತಿಳಿಸಿದ್ದಾರೆ.

