- ಶಾಸಕ ಆರಗಜ್ಞಾನೇಂದ್ರ ಗಮನ ಹರಿಸಲು ಸ್ಥಳೀಯರ ಮನವಿ
- ಜೆಡಿಎಸ್ ಯುವ ಮುಖಂಡ ತಟ್ಟೆಹಕ್ಕಲು ಸಂಪ್ರೀತ್ ದನಿ

ಶಿವಮೊಗ್ಗ : ಕುಂದಾದ್ರಿಯಿಂದ ಕುಂದಾದ್ರಿ ಬೆಟ್ಟಕ್ಕೆ ಹಾಗೂ ಕುಂದಾ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು ವಾಹನ ಸವಾರರು ದಿನ ನಿತ್ಯ ಹಿಡಿ ಶಾಪ ಹಾಕಿ ತಿರುಗಾಡುವಂತಾಗಿದೆ, ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿರುವ ಕುಂದಾದ್ರಿ ಬೆಟ್ಟ ದಿನ ನಿತ್ಯ ನೂರಾರು ಪ್ರವಾಸಿಗರು ಬಂದು ಹೋಗುತ್ತಾರೆ, ಇಂತ ಪ್ರಸಿದ್ಧಿ ಹೊಂದಿರುವ ಪ್ರವಾಸಿ ತಾಣದ ಪರಿಸ್ಥಿತಿಯೇ ಹೀಗಾಗಿರುವುದು ನಿಜಕ್ಕೂ ದುರಂತ. ಎಂಬುದು ಗ್ರಾಮಸ್ಥರ ವಾದವಾಗಿದೆ. ಬರುವ ಪ್ರವಾಸಿಗರು ಕೂಡ ರಸ್ತೆ ಸರಿ ಇಲ್ಲದಿರುವುದನ್ನು ನೋಡಿ ಬೆಟ್ಟಕ್ಕೆ ಹೋಗದೆ ಹಾಗೆ ವಾಪಸ್ ಆಗುತ್ತಿದ್ದಾರೆ.ಕ್ಷೇತ್ರದ ಶಾಸಕರು ಈ ಬಗ್ಗೆ ಗಮನ ಕೊಟ್ಟು ತಕ್ಷಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಕೊರಿಕೊಂಡಿದ್ದರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷರಾದ ತಟ್ಟೆಹಕ್ಕಲು ಸಂಪ್ರೀತ್, ಶಾಸಕರು, ಕಾಂಗ್ರೆಸ್ ಪಕ್ಷದ ನಾಯಕರು ಎಲ್ಲರೂ ಮೊನ್ನೆ ನಡೆದ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಇದೇ ರಸ್ತೆಯಲ್ಲಿ ಓಡಾಡಿದ್ದಾರೆ, ಸಮಸ್ಯೆ ಏನು ಎಂದು ಗೊತ್ತಿಲ್ಲದೆ ಇಲ್ಲ, ಇತ್ತೀಚಿಗೆ ಅತಿ ಹೆಚ್ಚು ಪ್ರವಾಸಿಗರು ಬರುತ್ತಿದ್ದು ಬೇರೆ ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಬರುತ್ತಿದ್ದಾರೆ, ಇಂಥ ಪ್ರಸಿದ್ಧಿ ಹೊಂದಿರುವ ಪ್ರವಾಸಿ ತಾಣದ ರಸ್ತೆ ಇಷ್ಟು ಹದಗೆಟ್ಟಿರುವುದು ಇಡೀ ಕ್ಷೇತ್ರಕ್ಕೆ ಒಂದು ಕೆಟ್ಟ ಹೆಸರು ಬರುವಂತಿದೆ, ಶಾಸಕರಾಗಲಿ ಅಥವಾ ಕಾಂಗ್ರೆಸ್ನ ನಾಯಕರಾಗಲಿ ಸರ್ಕಾರಕ್ಕೆ ಈ ವಿಷಯ ಮನವರಿಕೆ ಮಾಡಿಕೊಟ್ಟು ತಕ್ಷಣವೇ ಈ ರಸ್ತೆಯನ್ನು ಸರಿಪಡಿಸಬೇಕಾಗಿ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.