ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ 1 ರ ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿ ಹೊನ್ನೇತಾಳು ಗ್ರಾಮ ಸ ನಂ 116ರ ಸರ್ಕಾರಿ ಜಾಗದಲ್ಲಿ ಅನಾದಿ ಕಾಲದಿಂದ ಪೂಜಿಸುತ್ತ ಬಂದಿರುವ ದೇವಾಳ (ಭೂತ, ಬ್ರಹ್ಮ, ಯಕ್ಷ, ಚೌಡಿ ) ಮತ್ತು ಮಾಜಿ ಸೈನಿಕರ ಸಂಸ್ಕಾರ ಸ್ಥಳದಲ್ಲಿ ಪೂಜೆಗೆ ಹೋಗಲು ಅಡ್ಡಿ ಪಡಿಸುತ್ತಿರುವ ಬಗ್ಗೆ ಅದರಂತೆ ಉಲ್ಲೇಖ 2 ರ ವರದಿಯಂತೆ ಹೊನ್ನೇತಾಳು ಗ್ರಾಮದ ಸ ನಂ 116ರಲ್ಲಿ ಸರಕಾರಿ ಜಮೀನಿನಲ್ಲಿ ಹೊನ್ನೇತಾಳು ಗ್ರಾಮದ ಲಿಂಗಪ್ಪಚಾರಿ ಇವರ ಮಗ ಈಶ್ವರ ಆಚಾರಿ ಇವರು ಸರಕಾರಿ ಜಾಗಕ್ಕೆ ಅಡ್ಡವಾಗಿ ಕಬ್ಬಣದ ಗೇಟ್ ಹಾಕಿದ್ದು, ಇವರು ಅಕ್ರಮವಾಗಿ ಅಂದಾಜು 1 ಎಕರೆ ಜಾಗವನ್ನು ಅನಧಿಕೃತ ವಾಗಿ ಒತ್ತುವರಿ ಮಾಡಿದ್ದ ಹಿನ್ನಲೆ ಕರ್ನಾಟಕ ಭೂ ಕಂದಾಯ ಇಲಾಖೆ ಕಾಯ್ದೆ 1964ರ ನಿಯಮ 104ರ ಅಡಿಯಲ್ಲಿ ದಿ 19 ರಂದು ತೆರವುಗೊಳಿಸಲಾಯಿತು . ಈ ವೇಳೆ ಆಗುಂಬೆ ರಾಜಸ್ವ ನಿರೀಕ್ಷಕರಾದ ಯಶವಂತ್ ಹಾಗೂ ಗ್ರಾಮ ಆಡಳಿತಾಧಿಕಾರಿ ಅಭಿಷೇಕ್ ಗೌಡ ಹಾಗೂ ಗ್ರಾಮ ಸಹಾಯಕ ನಾಗರಾಜ್ ಕುಂದ ಹಾಗೂ ಆಗುಂಬೆ ಪೊಲೀಸರು ಇದ್ದರು.

Leave a Reply

Your email address will not be published. Required fields are marked *