- ಪ್ರಕರಣದ ಅಂಕಿಸಂಖ್ಯೆಗಳೆಷ್ಟು

ಕಳೆದ ವರ್ಷಕ್ಕೆ ಹೋಲಿಸಿದರೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದೆ. ಇದರಿಂದ ಜನ ನಿದ್ದೆಗೆಡುವಂತಹ ಸ್ಥಿತಿ ನಿರ್ಮಾಣವಾಗಿದೆ.2022ರಲ್ಲಿ ಇಡೀ ವರ್ಷಕ್ಕೆ 2335 ಡೆಂಗ್ಯೂ ಕೇಸ್‌ಗಳು ಪತ್ತೆಯಾಗಿದ್ದವು. ಆದರೆ, 2023ರಲ್ಲಿ 11,136 ಕೇಸ್‌ಗಳು ಪತ್ತೆಯಾಗಿದ್ದವು. 2024 ಜನವರಿಯಿಂದ ಜೂನ್ ತಿಂಗಳವರೆಗೆ 1530 ಡೆಂಗ್ಯೂ ಕೇಸ್‌ಗಳು ದಾಖಲಾಗಿವೆ. ಇದರಿಂದಾಗಿ ಬೆಂಗಳೂರಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಸೊಳ್ಳೆಗಳು ಹೆಚ್ಚಾಗದಂತೆ ಬಿಬಿಎಂಪಿ ಕ್ರಮಕ್ಕೆ ಮುಂದಾಗಿದೆ.ಮುನ್ಸೂಚನೆಗಳೇನು * ಕಣ್ಣುಗಳ ಹಿಂಭಾಗದಲ್ಲಿ ನೋವು* ಊದಿಕೊಂಡಿರುವ ಗ್ರಂಥಿಗಳು* ಚರ್ಮದ ಭಾಗದಲ್ಲಿ ದದ್ದುಗಳು* ತಲೆನೋವು* ಮೈಕೈ ನೋವು ಅಥವಾ ಕೀಲು ನೋವು* ವಾಕರಿಕೆ
