- ಏನಿದು ಘಟನೆ ಸುದ್ದಿ ಓದಿ

ಬೀದರ್ :ರಾತ್ರಿ ವೇಳೆ ಮಣ್ಣಲ್ಲಿ ಹೂತಿದ್ದ ಮಗು ಬೆಳಗಾಗುವಷ್ಟರಲ್ಲಿ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಪ್ರತ್ಯಕ್ಷಗೊಂಡ ಘಟನೆ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಭಾನುವಾರ ಜರುಗಿದೆ.ಮಂಠಾಳ ಗ್ರಾಮದ ನಿವಾಸಿ ಅಂಬಯ್ಯ ಸ್ವಾಮಿ ಅವರ ಒಂದೂವರೆ ವರ್ಷದ ಹೆಣ್ಣು ಮಗು ಶನಿವಾರ ಸಂಜೆ ಅನಾರೋಗ್ಯದಿಂದ ಮೃತಪಟ್ಟಿತ್ತು. ನಂತರ ತಡ ರಾತ್ರಿ 12ರ ಸುಮಾರಿಗೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಕೂಡಿ ಮಗುವಿಗೆ ಗ್ರಾಮದ ಪಕ್ಕದ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ತೆರಳಿದ್ದರು. ಆದರೆ ಮಾರನೇ ದಿವಸ ಬೆಳಿಗ್ಗೆ ಮರದಲ್ಲಿ ಕಟ್ಟಿದ್ದ ಜೋಕಾಲಿಯಲ್ಲಿ ಪ್ರತ್ಯಕ್ಷವಾಗಿತ್ತು ಇದನ್ನು ಕಂಡ ಜನರು ಆಶ್ಚರ್ಯ ಪಟ್ಟಿದ್ದಲ್ಲದೆ ಭಯಬೀತರಾಗಿದ್ದಾರೆ.


