- ಪ್ರಕರಣ ಹೆಚ್ಚಾದ್ರೆ ಗ್ರಾಂ ಪಂ ಅಧಿಕಾರಿಗಳೇ ನೇರ ಹೊಣೆ – ನಂದನ್

ಶಿವಮೊಗ್ಗ : ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ದಿನೇ ದಿನೇ ಡೆಂಗ್ಯೂ ಹೆಚ್ಚಾಗುತ್ತಿದ್ದು, ಇದೀಗ 483 ಪ್ರಕರಣ ದಾಖಲಾಗಿದೆ .EO ಇದರ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಪಿಡಿಓ ಗೆ ಸೂಚನೆ ನೀಡಿ ಸೊಳ್ಳೆಗಳ ನಿಯಂತ್ರಣ ಮಾಡಲು ಮುಂಜಾಗ್ರತೆ ಕ್ರಮ ವಹಿಸಬೇಕು. ತಕ್ಷಣ ಕಾರ್ಯ ಪ್ರವೃತ್ತರಾಗದಿದ್ದಲ್ಲಿ ಗ್ರಾಮ ಪಂಚಾಯಿತಿ ಇದಕ್ಕೆ ನೇರ ಹೊಣೆ ಎಂದು ಮಾಜಿ ಗ್ರಾಮ ಪಂ ಅಧ್ಯಕ್ಷ. ತಾಲೂಕು ಬಿಜೆಪಿ ಉಪಾಧ್ಯಕ್ಷರಾದ ಹಸಿರುಮನೆ ನಂದನ್ ಎಚ್ಚರಿಸಿದ್ದಾರೆ.ಈ ಹಿಂದಿನ ವರ್ಷದ ಆಡಳಿತದ ವ್ಯವಸ್ಥೆಯಲ್ಲಿ ಡೆಂಗ್ಯೂ ಬಗ್ಗೆ ಮುಂಜಾಗ್ರತೆ ಇತ್ತು ಮುಂದೆ ಕೂಡ ಆಡಳಿತ ಸರ್ಕಾರ ಈ ಬಗ್ಗೆ ಗಮನ ಹರಿಸಿ ಸೊಳ್ಳೆಗಳ ನಿಯಂತ್ರಣ ಹಾಗೂ ರೋಗ ತಡೆಗಟ್ಟಲು ಬೇಕಾದ ಅಗತ್ಯ ಕ್ರಮ ವಹಿಸಬೇಕು ಎಂದು ಹಸಿರು ಮನೆ ನಂದನ್ ಸಂಬಂಧ ಪಟ್ಟ ಇಲಾಖೆಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
