- ಮೈದುಂಬಿ ಹರಿಯುತ್ತಿವೆ ನದಿ, ಹಳ್ಳ
- ಜೋಪಾನ… ಜೋಪಾನ…

ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಕಳೆದ 2 ವಾರದಿಂದ ನಿರಂತರ ಮಳೆ ಬೀಳುತ್ತಿದೆ. ಅದ್ರಲ್ಲೂ ಮುಂಗಾರು ಮಳೆಯ ಅಬ್ಬರಕ್ಕೆ ಜನರು ಕೂಡ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಈ ವಾರದಲ್ಲಿ ಮಳೆ ನಿಲ್ಲಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈಗ ಬೇರೆ ಸುದ್ದಿ ಬರ್ತಿದೆ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಮುಂದಿನ 72 ಗಂಟೆಗಳಲ್ಲಿ ಭಾರಿ ಮಳೆ ಬೀಳುತ್ತದೆ, ಹೀಗಾಗಿ ಎಚ್ಚರದಿಂದ ಇರಿ ಎಂದು ಸೂಚನೆ ನೀಡಲಾಗಿದೆ.
ಎಚ್ಚರಿಕೆ ಅಗತ್ಯ
- ಮಳೆಗಾಲದ ಸಮಯ ತಂಡಿಯಾದ ತಂತಿಗಳನ್ನು ಮುಟ್ಟಬೇಡಿ
- ಸಿಡಿಲು ಗುಡುಗು ಬರುವಾಗ ಮನೆಯಲ್ಲೇ ಇರಿ
- ಮರದ ಕೆಳಗೆ ನಿಲ್ಲುವುದು ಬೇಡ
- ವಾಹನ ಚಾಲನೆ ಮಾಡುವಾಗ ಎಚ್ಚರ ಅಗತ್ಯ

