
ಶಿವಮೊಗ್ಗ: ಭಾರತ್ ಅಕ್ಕಿಯೋಜನೆ ಸ್ಥಗಿತಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಟೋಪಿ ಹಾಕಿದ್ದಾರೆ ಎಂದು ಶಿವಮೊಗ್ಗ ಜಿಲ್ಲೆ ಕಾಂಗ್ರೆಸ್ ವಕ್ತಾರರಾದ ಪಡುವಳ್ಳಿ ಹರ್ಷೇಂದ್ರ ಕುಮಾರ್ ಆರೋಪಿಸಿದ್ದಾರೆ. ಎಂ.ಪಿ ಚುನಾವಣೆಗೆ ಮುನ್ನ ಯೋಜನೆ ಜಾರಿ ಮಾಡಿದ್ದರು, ಗೆದ್ದ ಬಳಿಕ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ಕೇಂದ್ರ ಬಿಜೆಪಿ ಸರ್ಕಾರ ಮಾಡಿದೆ ಎಂದು ಆರೋಪಿಸಿದ್ದಾರೆ. ಭಾರತ್ ಅಕ್ಕಿ ಯೋಜನೆ ಆರಂಭಿಸುವಂತೆ ಕೇಂದ್ರ ಸಚಿವರಾದ ಎಚ್. ಡಿ .ಕುಮಾರಸ್ವಾಮಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್. ಯಡಿಯೂರಪ್ಪ ಪ್ರಧಾನಿ ಅವರ ಮೇಲೆ ಒತ್ತಡ ತರಬೇಕೆಂದು ಪಡುವಳ್ಳಿ ಹರ್ಷೇಂದ್ರ ಕುಮಾರ್ ಆಗ್ರಹಿಸಿದ್ದಾರೆ
