- ಕೊಪ್ಪ ತಾಲೂಕಿನ ಬಂಡಿಗಡಿ ಕೃಷ್ಣಯ್ಯ ಗೌಡರಿಗೆ ಸೇರಿದ ಜಮೀನಿನಲ್ಲಿ ನಿಂತಿದೆ ನೀರು
- ಅಧಿಕಾರಿಗಳನ್ನ ತಡೆಯುವ ಕೈ ಪಕ್ಷದ ನಾಯಕ ಯಾರು?
- ಶಾಸಕರೇ ದಯವಿಟ್ಟು ಗಮನ ಹರಿಸಿ

ಕೊಪ್ಪ : ತಾಲೂಕಿನ ಹರಿಹರ ಪುರ ಬಂಡಿಗಡಿ ಗ್ರಾಮದ ಸರ್ವೇ ನಂಬರ್ 13 ರಲ್ಲಿ ಕೃಷ್ಣಯ್ಯ ಗೌಡ ಚಿನ್ನನಗೌಡ ಇವರಿಗೆ ಸೇರಿದ ಎರಡು ಎಕರೆ ಜಮೀನು ಹೊಂದಿದ್ದು ಒತ್ತುವರಿ 4 ಎಕರೆ ಸೇರಿ ಒಟ್ಟು ಆರು ಎಕರೆಯಲ್ಲಿ ಅಡಿಕೆ ಬೆಳೆ ಮಾಡಿಕೊಂಡಿದ್ದರು ಮಧ್ಯದಲ್ಲಿ ಅರ್ಧ ಹಳ್ಳ ಮುಚ್ಚಿದ್ದು ಇದರಿಂದ ಕೃಷ್ಣಯ್ಯ ಅವರ ಜಮೀನು ಭಾಗಕ್ಕೆ ನೀರು ನುಗ್ಗಿ ಸಂಪೂರ್ಣ ತೋಟ ಮುರುಗಡೆಯಾಗಿದೆ. ಈ ಹಿಂದೆ 2022 ರಲ್ಲಿ ಅರ್ಜಿ ಸಹ ಕೊಟ್ಟಿದ್ದು ಅಧಿಕಾರಿಗಳಾಗಲಿ ಶಾಸಕರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಗ್ರಾಮ ಪಂಚಾಯಿತಿ ನ್ಯಾಯ ಸಮಿತಿಯವರು ಭೇಟಿ ಕೊಟ್ಟು ಸ್ಥಳ ಪರಿಶೀಲನೆ ಮಾಡಿದ್ದು ಇವರು ಕೂಡ ಯಾವುದೇ ಪ್ರಯೋಜನವಾಗಲಿಲ್ಲ ಇದೀಗ ಮತ್ತೆ ಮಳೆ ಆರಂಭವಾಗಿದ್ದು ಎರಡು ಎಕರೆ ಜಮೀನು ಸಂಪೂರ್ಣ ಜಲಾವೃತಗೊಂಡಿದೆ ಕಾಣದ ಕೈ ಪಕ್ಷದ ನಾಯಕರೊಬ್ಬರ ಕೈವಾಡವಿದ್ದು ಅಧಿಕಾರಿಗಳನ್ನು ತಡೆಯುತ್ತಿದ್ದಾರೆ ಎಂಬುದು ಕೃಷ್ಣಯ್ಯ ಇವರ ಆಕ್ರೋಶವಾಗಿದೆ. ಸದರಿ ಸ್ಥಳಕ್ಕೆ ಅಧಿಕಾರಿಗಳು ಹಾಗು ಶಾಸಕರು ಭೇಟಿ ನೀಡಿ ಸೂಕ್ತ ಕ್ರಮ ತಗೆದುಕೊಂಡು ಜೊತೆಗೆ ಪರಿಹಾರ ನೀಡಲು ಸತ್ಯಶೋಧ ಮಾಧ್ಯಮದ ಮೂಲಕ ಕೇಳಿಕೊಂಡಿದ್ದಾರೆ. ಇದಾದ ಬಳಿಕವು ಯಾವುದೇ ಕ್ರಮ ಜರುಗಿಸದೆ ಇದ್ದಲ್ಲಿ ಕೃಷ್ಣಯ್ಯ ಗೌಡ ದಯಾಮರಣಕ್ಕೆ ಪತ್ರ ಕೂಡ ಬರೆದಿದ್ದಾರೆ.
