- ಏನಿದು ಘಟನೆ ಸುದ್ದಿ ಓದಿ

ತೀರ್ಥಹಳ್ಳಿ :ತಾಲೂಕಿನ ಅರಳಸುರುಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹುಲಿಸರ ಗ್ರಾಮದ ಸರ್ವೇ ನಂ 125 ಹಾಗೂ 126 ರಲ್ಲಿ ದಿನೇಶ್ (45 ವರ್ಷ ) ಹಾಗೂ ಸತೀಶ್ (49 ವರ್ಷ ) ಎಂಬವರು ಜಮೀನು ಇದ್ದು . ಇನ್ನೂ ರಾಜಕಾಲುವೆ ಮುಚ್ಚಿ ಹೋಗಿದ್ದರಿಂದ ಗುಡ್ಡದ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ ಎಂದು ಗ್ರಾಮಸ್ಥರು ದೂರಿದ್ದರು. ಹೀಗಾಗಿ ಗ್ರಾಮಸ್ಥರ ಅಹವಾಲಿನ ಮೇರೆಗೆ ಸರ್ಕಾರಿ ಅಧಿಕಾರಿಗಳು, ದಿನೇಶ್ ಹಾಗೂ ಸತೀಶ್‌ರ ಜಮೀನಿನಲ್ಲಿ ರಾಜಕಾಲುವೆ ಮಾಡಲು ಮುಂದಾಗಿದ್ದಾರೆ. ಈ ವೇಳೇ ಆಕ್ರೋಶ ಹೊರಹಾಕಿದ ಸಹೋದರು ಅಲ್ಲಿಯೇ ಇದ್ದ ಕಳೇನಾಷಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಇಬ್ಬರನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆ ಜೆಸಿ ಹಾಸಿಟಲ್‌ಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದು ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿ ಇಬ್ಬರ ಚಿಕಿತ್ಸೆಗೆ ಸ್ಪಂದಿಸಿದ್ದಾರೆ.

