ಆಗುಂಬೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು ತಂಡದವರ ಕಾರ್ಯಾಚರಣೆ

ಮದ್ಯ ಪಾನ ಮಾಡಿ ವಾಹನ ಚಲಾಯಿಸುತಿದ್ದ ಆರೋಪಿಗೆ ರೂ.10,000 ದಂಡ ವಿಧಿಸಲಾಗಿದೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಆಗುಂಬೆ ಫಾರೆಸ್ಟ್ ಚೆಕೆಪೋಸ್ಟ್ ಹತ್ತಿರ ದಿನಾಂಕ 21/07/2024 ರಂದು ಪಿಎಸ್ಐ ರಂಗನಾಥ್ ಅಂತರಗಟ್ಟಿ, ಎ ಎಸ್ ಐ .ನಾಗೇಶ್, ದಿವಾಕರ್, ಅನಿಲ್ ರವರು ವಾಹನ ತಪಾಸಣೆ ಮಾಡುವಾಗ ಅಲ್ಟ್ರೋಜ್ ಕಾರ್ ಚಾಲಕ ಸಂತೋಷ ಕುಮಾರ್ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿರುವುದಾಗಿ ಕಂಡುಬಂದಿದ್ದು,ಪ್ರಕರಣ ದಾಖಲಿಸಿ ನ್ಯಾಯಲಯಕ್ಕೆ ವರದಿ ಮಾಡಿ ದಿನಾಂಕ 22/07/24 ರಂದು ಪ್ರಥಮ ದರ್ಜೆ ವ್ಯವಹಾರಗಳ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ತೀರ್ಥಹಳ್ಳಿ ನ್ಯಾಯಲಯ ನ್ಯಾಯಾಧೀಶರು 10000 ರುಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *