- ಪೂರ್ತಿ ಸುದ್ದಿಗಾಗಿ ಲಿಂಕ್ ಒತ್ತಿ

ಪುಷ್ಯ ಮಳೆಯ ಆರ್ಭಟ ಹೆಚ್ಚಾಗಿದ್ದು ಈ ಮಳೆಗೆ ತಾಲೂಕಿನಲ್ಲಿ ಮೂರನೇ ಬಲಿಯಾಗಿದೆ. ದೇವಂಗಿ ಬಳಿ ಮಂಗಳವಾರ ಉಂಟೂರು ಹಳ್ಳ ದಾಟುವಾಗ ಕೊಚ್ಚಿ ಹೋಗಿ ರೈತರೊಬ್ಬರು ಮೃತಪಟ್ಟಿದ್ದಾರೆ. ಬುಧವಾರ ತೋಟದ ಪಕ್ಕದ ಹಳ್ಳದಲ್ಲಿ ಶವ ಸಿಕ್ಕಿದೆ.ಕೃಷ್ಣಮೂರ್ತಿ ನಾಯ್ಕ್ (55) ಮೃತವ್ಯಕ್ತಿಯಾಗಿದ್ದು ಇವರು ಮಂದಾರ್ತಿ ಮೇಳದ ಪ್ರಸಿದ್ಧ ಯಕ್ಷಗಾನ ಕಲಾವಿದ ಪ್ರಸನ್ನ ಅವರ ತಂದೆ. ಮೃತರು ಪತ್ನಿ, ಒಂದು ಹೆಣ್ಣು ಮತ್ತು ಪುತ್ರ ಪ್ರಸನ್ನ ಅವರನ್ನು ಅಗಲಿದ್ದಾರೆ.ಸ್ಥಳಕ್ಕೆ ಪೊಲೀಸರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೈಲಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆಶಾಲತಾ, ಕಂದಾಯ ಇಲಾಖೆ ಅಧಿಕಾರಿ ಸಂತೋಷ್ ಕುಮಾರ್, ಆರ್ ಐ ಸುಗುಣೇಶ್, ಪಟ್ಟಣ ಪಂಚಾಯತ್ ಸದಸ್ಯ ಹಾಗೂ ಯಕ್ಷಗಾನ ಕಲಾವಿದರಾದ ಬಿ ಗಣಪತಿ ಸೇರಿದಂತೆ ಹಲವಾರು ಭೇಟಿ ನೀಡಿದ್ದಾರೆ.
