- ಎರಡು ಪದಕಕ್ಕೆ ಕೊರಳೋಡ್ಡಿದ ಮನು ಬಾಕರ್
- ಸರಬ್ ಜೋತ್ ಸಿಂಗ್ ಅಮೋಘ ಪ್ರದರ್ಶನ

ಪ್ಯಾರಿಸ್ ಒಲಂಪಿಕ್ಸ್ ನಲ್ಲಿ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಬಾಚಿಕೊಂಡ ಮನು ಬಾಕರ್, ಐತಿಹಾಸಿಕ ಸಾಧನೆ ಮಾಡಿದ್ದಾರೆ.ಇಬ್ಬರೂ ಹರಿಯಾಣ ಮೂಲದ ಶೂಟರ್‌ಗಳು ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈಗಾಗಲೇ ಮಹಿಳೆಯ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚು ಗೆದ್ದಿದ್ದ ಮನು ಬಾಕರ್, ಮಿಶ್ರ ತಂಡ ವಿಭಾಗದಲ್ಲೂ ಕಂಚಿಗೆ ಕೊರಳೊಡ್ಡಿದ್ದಾರೆ. ಸರಬ್ ಜೋತ್ ಸಿಂಗ್ ಸಹ ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರು. ಸರಬ್ ಜೋತ್ ಸಿಂಗ್ ಹಾಗೂ ಮನು ಬಾಕರ್ ಜೋಡಿ ಈ ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಿದೆ.


