• ನಾಗರಿಕರು ಹಾಗೂ ಭೀಮ್ ಆರ್ಮಿ ಶೃಂಗೇರಿ ಕ್ಷೇತ್ರ ಪ್ರಶಂಸೆ

ಇತ್ತೀಚಿಗೆ ಕೊಪ್ಪದ ದಲಿತ ಹುಡುಗಿ ಕೊಲೆ ಪ್ರಕರಣ ಬಾರಿ ಸದ್ದು ಮಾಡಿತ್ತು. ಈ ಪ್ರಕರಣವನ್ನು ಭೇದಿಸಲು ಕೋಪ ಠಾಣೆಯ ಪೊಲೀಸರ ಮುತ್ತುವರ್ಜಿಯ ಕಾರಣದಿಂದ ಈ ಪ್ರಕರಣಕ್ಕೆ ನ್ಯಾಯ ದೊರಕಿದೆ ಕಾರಣ ಹುಡುಗಿಯ ಮನೆ ಕೊಪ್ಪ ತಾಲೂಕಿನ ಅಚ್ಚರಡಿ ಚಿಕ್ಕಮಗಳೂರು ಜಿಲ್ಲೆ,ಆದರೆ ಕೊಲೆ ನಡೆದಿರುವುದು ರಿಪ್ಪನಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿ ಶಿವಮೊಗ್ಗ ಜಿಲ್ಲೆ. ಆದಕಾರಣ ರಿಪ್ಪನ್ ಪೇಟೆಯ ಪೊಲೀಸ್ ಠಾಣೆಯ ಪೊಲೀಸರಾಗಲಿ ಅಥವಾ ಕೊಪ್ಪ ಪೊಲೀಸ್ ಠಾಣೆಯ ಪೊಲೀಸರಾಗಲಿ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಮ್ಮನೆ ಕುಳಿತಿದ್ದರೆ ಈ ಪ್ರಕರಣ ಭೇದಿಸಲು ಸಾಧ್ಯವೇ ಇರಲಿಲ್ಲ, ಆದರೆ ಕೊಪ್ಪ ರಾಣೆಯ ಸಬ್ ಇನ್ಸ್ಪೆಕ್ಟರ್ ಸಬ್ ಬಸವರಾಜ್ ರವರ ಮುತುವರ್ಜಿಯ ಕಾರಣದಿಂದ ಈ ಪ್ರಕರಣವನ್ನು ಬೇಧಿಸಿ ದಲಿತ ಹುಡುಗಿ ಕೊಲೆ ಪ್ರಕರಣಕ್ಕೆ ನ್ಯಾಯ ದೊರೆತಿದೆ.ದಿನಾಂಕ 02 .07 .2024 ರಂದು ಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಹರಂದೂರು ಗ್ರಾಮದ ಅಚ್ಚರಡಿಯಿಂದ ಕಾಣೆಯಾಗಿದ್ದ ಸೌಮ್ಯ ಎಂಬ ಹುಡುಗಿಯನ್ನು ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ ವಾಸಿಯಾದ ಸೃಜನ್ ಎಂಬಾತನು ಪ್ರೀತಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಕೊಲೆ ಮಾಡಿ ಶಿವಮೊಗ್ಗ ಜಿಲ್ಲೆಯ ಆನಂದಪುರ ಊರಿನ ರೈಲ್ವೆ ಹಳಿ ಪಕ್ಕದಲ್ಲಿ ಯಾರಿಗೂ ತಿಳಿಯದಂತೆ ಜೆ.ಜೆ.ಮ್ ಗುಂಡಿಯಲ್ಲಿ ಹುತು ಹಾಕಿದ್ದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀಯುತ ಬಸವರಾಜ್ ಜಿ.ಕೆ ಹಾಗೂ ಸಿಬ್ಬಂದಿಗಳು ತ್ವರಿತಗತಿಯಲ್ಲಿ ತನಿಖೆ ಕೈಗೊಂಡು ಕೊಲೆ ಆರೋಪಿ ಸೃಜನ ನನ್ನು ಬಂಧಿಸಿ ತೀವ್ರ ತನಿಖೆಗೆ ಒಳಪಡಿಸಿದ ಕಾರಣ ಆತ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಹೊಸ ಕಾನೂನಿನ ಪ್ರಕಾರ 103,238 ಹಾಗೂ ಅಟ್ರಾ ಸಿಟಿ ಪ್ರಕರಣ ದಾಖಲಾಗಿದ್ದು ಕೊಲೆ ಆರೋಪಿಯನ್ನು ಶಿವಮೊಗ್ಗ ದ ಶ್ರೀ ಕೃಷ್ಣ ಜನ್ಮಸ್ಥಳಕ್ಕೆ ಕಳುಹಿಸಲಾಗಿದೆ. ಈ ಪ್ರಕರಣವನ್ನು ಅತ್ಯಂತ ಮುತುವರ್ಜಿಯಿಂದ ಭೇದಿಸಿದ ಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಸವರಾಜ್ ಹಾಗೂ ತಂಡಕ್ಕೂ ಇವರಿಗೆ ಮಾರ್ಗದರ್ಶನ ನೀಡಿದ ಜಿಲ್ಲಾ ವರಿಷ್ಠಾಧಿಕಾರಿಗಳು ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ರವರಿಗೂ ಹಾಗೂ ಈ ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಸರ್ವರಿಗೂಕೊಪ್ಪದ ಪ್ರಜ್ಞಾವಂತ ನಾಗರಿಕರು ಹಾಗೂ ಭೀಮ್ ಆರ್ಮಿ ಶೃಂಗೇರಿ ಕ್ಷೇತ್ರ ಪ್ರಶಂಸೆ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *