• ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಏನಂದ್ರು ನೀರಜ್

ನೀರಜ್ ಚೋಪ್ರಾ‌ ಅವರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೋಟ್ಯಾಂತರ ಕ್ರೀಡಾಪ್ರೇಮಿಗಳ ನಿರೀಕ್ಷೆಯನ್ನು ಸಾಕಾರಗೊಳಿಸಿದ್ದಾರೆ.ಅವರ ಕಠಿಣ ಪರಿಶ್ರಮಕ್ಕೆ ಒಲಿದಿರುವ ಈ ಪುರಸ್ಕಾರಕ್ಕಾಗಿಅವರಿಗೆ ಸಮಸ್ತ ಭಾರತೀಯರ ಪರವಾಗಿ ಅಭಿನಂದನೆಗಳು.ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಕಳೆದ ಏಳು ವರ್ಷಗಳು ತನಗೆ ಹೇಗೆ ಕಠಿನವಾಗಿವೆ ಎಂಬುದನ್ನುವಿವರಿಸಿ “ನಾನು 2017 ರಲ್ಲಿ ನೋವನ್ನು ಅನುಭವಿಸಿದೆ. ಅದರ ನಂತರ, ನಾನು ಬಹಳಷ್ಟು ಚಿಕಿತ್ಸೆಗಳನ್ನು ಪಡೆದುಕೊಂಡೆ. ಆದರೆ ಈಗ ನಾನು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ” ಎಂದರು.ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದ ಚೋಪ್ರಾ ಅವರು ಚಿನ್ನ ಗೆದ್ದು ಭಾರೀ ಸುದ್ದಿಯಾಗಿದ್ದರು. ಈ ಬಾರಿ ನೋವಿನಲ್ಲೂ ಹೋರಾಟ ನಡೆಸಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಋತುವಿನ ಅತ್ಯುತ್ತಮ 89.45 ಮೀ ಎಸೆತ ದಾಖಲಿಸಿದರು. ಎರಡು ಒಲಿಂಪಿಕ್ ಪದಕಗಳನ್ನು ಪಡೆದ ಭಾರತದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಹಿರಿಮೆಗೆ ಭಾಜನರಾದರು.

Leave a Reply

Your email address will not be published. Required fields are marked *