- ಮುಂಜಾನೆ 5 ರಿಂದ ಟ್ರಾಫಿಕ್ ಜಾಮ್

ತೀರ್ಥಹಳ್ಳಿ: ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿ ರಸ್ತೆ ಮದ್ಯದಲ್ಲಿ ಲಾರಿಗಳು ನಿಂತ ಪರಿಣಾಮ ಹುಲಿಕಲ್ ಮಾರ್ಗದ ರಸ್ತೆ ಸಂಚಾರ ಬಂದ್ ಆಗಿದೆ.ಗುರುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಮಳೆಯ ಕಾರಣ ಮಂಜು ಮುಸುಕಿದ ವಾತಾವರಣದಿಂದ ಈ ಅಪಘಾತ ಸಂಭವಿಸಿದ್ದು, ಎರಡು ಕಡೆಯೂ ಘಾಟಿ ರಸ್ತೆಯಲ್ಲಿ ಸಾಲುಗಟ್ಟಿ ವಾಹನಗಳು ನಿಂತಿವೆ.ಹುಲಿಕಲ್ ಚೆಕ್ ಪೋಸ್ಟ್ ಸಮೀಪ ಘಟನೆ ಸಂಭವಿಸಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಸಂಚಾರ ಮುಕ್ತಗೊಳಿಸಲು ಹರ ಸಾಹಸ ಪಡುವಂತಾಗಿದೆ.ನಗರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.
ವರದಿ :ಅಕ್ಷಯ್ ಕುಮಾರ್




