
ಶಿವಮೊಗ್ಗ :ಗಣಪತಿ ಮೂರ್ತಿ ತರಲು ಟಾಟಾ ಏಸ್ ವಾಹನದಲ್ಲಿ ಹೋಗುತ್ತಿದ್ದ ವೇಳೆ ವಾಹನ ಪಲ್ಟಿ ಹೊಡೆದಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಸಾವನಪ್ಪಿದ್ದು,ಇಬ್ಬರು ಯುವಕರು ಶಿವಮೊಗ್ಗ ಮೆಗ್ಗಾನ್ ಗೆ ದಾಖಲಾಗಿರುವ ಘಟನೆ ಸೆ 7 ರ ಬೆಳಿಗ್ಗೆ ವರದಿಯಾಗಿದೆ. ಘಟನೆ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ನಡೆದಿದೆ. ಧನುಷ್ (20) ಹಾಗೂ ಶ್ರೀಧರ್ ಎಂದು ಗುರುತಿಸಲಾಗಿದೆ.ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ನಡೆದಿದ್ದು ಚಾಲಕ ಮನೋಜ್ ಹಾಗೂ ಮತ್ತೋರ್ವನನ್ನ ಮೆಗ್ಗಾನ್ ತುರ್ತುಘಟಕಕ್ಕೆ ರವಾನಿಸಲಾಗಿದೆ. ಸ್ಥಳೀಯರು ಯುವಕರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.ಚಾಲಕ ಮನೋಜ್ ಹಾಗೂ ಮತ್ತೋರ್ವನನ್ನ ಮೆಗ್ಗಾನ್ ತುರ್ತುಘಟಕಕ್ಕೆ ರವಾನಿಸಲಾಗಿದೆ. ಅಪಘಾತವಾಗುತ್ತಿದ್ದಂತೆ ಸ್ಥಳೀಯರು ಯುವಕರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.



