
ದಿನಾಂಕ 20.09.2024. ರಂದು ಶಾಲಾ ಶಿಕ್ಷಣ ಇಲಾಖೆ ಹಾಗೂ ಸಹ್ಯಾದ್ರಿ ಪ್ರೌಢಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಡಾ|| ಯು.ಆರ್. ಅನಂತಮೂರ್ತಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆದ 17 ವರ್ಷ ವಯೊಮಿತಿಯೊಳಗಿನ ತಾಲ್ಲೂಕುಮಟ್ಟದ ಬಾಲಕ ಬಾಲಕಿಯರ ಅಥ್ಲೆಟಿಕ್ ಕ್ರೀಡಾಕೂಟ ದಲ್ಲಿ, ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ 8 ನೆಯ ತರಗತಿಯ ವಿದ್ಯಾರ್ಥಿನಿ ಮಿಥಾಲಿ ಟಿ.ಎಸ್ ಬಾಲಕಿಯರ ವಿಭಾಗದ ಗುಂಡು ಎಸೆತದಲ್ಲಿ ಪ್ರಥಮಸ್ಥಾನವನ್ನು ಹಾಗೂ 10 ನೆಯ ತರಗತಿ ವಿದ್ಯಾರ್ಥಿ ಸಾರ್ಥಕ್ ಕೆ. ಎಸ್ ಬಾಲಕರ ವಿಭಾಗದ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇದಲ್ಲದೆ 9 ನೆಯ ತರಗತಿಯ ಸಾನ್ವಿ ಜಾವಲಿನ್ ಎಸೆತದಲ್ಲಿ ತೃತಿಯಸ್ಥಾನವನ್ನು ಪಡೆದು ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿಯನ್ನು ತಂದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ವಾಗ್ದೇವಿ ಶಮೂಹ ಶಿಕ್ಷಣಸಂಸ್ಥೆಯ ಅಧ್ಯಕ್ಷರು ಸದಸ್ಯರು ಶಿಕ್ಷಕರು ಹಾಗೂ ಪೋಷಕರು ಅಭಿನಂದಿಸಿ ಮುಂದಿನ ಕ್ರೀಡಾಕೂಟಕ್ಕೆ ಶುಭಹಾರೈಸಿದ್ದಾರೆ.



