✅ದೃಷ್ಠಿ ದೋಷದಿಂದ ಬಳಲುವ ರೋಗಿಗಳು ಹೆಚ್ಚಿರುವ ಹಿನ್ನಲೆ
🔷ಜನ ಜಾಗೃತಿ ಹಿತದೃಷ್ಟಿಯಿಂದ ಸರ್ಕಾರ ಚಿಂತನೆ

ರಾಜ್ಯದಲ್ಲಿ ಕಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ಅನೇಕ ಕಾರಣಗಳಿಂದ ಕಣ್ಣು ಕಳೆದುಕೊಂಡವರು, ದೃಷ್ಠಿ ದೋಷದಿಂದ ಬಳಲುತ್ತಿರುವವರು ಜಗತ್ತು ನೋಡಲು ಕಣ್ಣುಪಡೆಯಲು ಕಾಯುತ್ತಿದ್ದಾರೆ. ಇಂತವರಿಗೆ ದೃಷ್ಠಿ ಭಾಗ್ಯ ನೀಡುವ ಉದ್ದೇಶದಿಂದ ಆರೋಗ್ಯ ಇಲಾಖೆ ಕಣ್ಣು ದಾನ ಹೆಚ್ಚಿಸಲು ಮುಂದಾಗಿದೆ. ಹೀಗಾಗಿ ಸ್ಯಾಂಡಲ್ವುಡ್ ಯುವರತ್ನ ಪುನೀತ್ ರಾಜ್ಕುಮಾರ್ ಹೆಸರಲ್ಲಿ ಐ ಬ್ಯಾಂಕ್ ತೆರೆಯಲು ಸರ್ಕಾರ ಚಿಂತನೆ ಮಾಡಿದೆ.

ಈಗಾಗಲೇ ರಾಜ್ಯದಲ್ಲಿ ಸಾವಿರಾರು ಜನರು ದೃಷ್ಠಿದೋಷ ಅನುಭವಿಸುತ್ತಿದ್ದಾರೆ. ಸಾವಿರಾರು ಜನರು ಕಣ್ಣಿಗಾಗಿ ಕ್ಯೂನಲ್ಲಿದ್ದಾರೆ. ಹೀಗಾಗಿ ಪುನೀತ್ ರಾಜಕುಮಾರ್ ಹೆಸರಲ್ಲಿ ಆರೋಗ್ಯ ಇಲಾಖೆ ಐ ಬ್ಯಾಂಕ್ ಆರಂಭಿಸಲು ಮುಂದಾಗಿದೆ. ನಟ ಪುನೀತ್ ಹೆಸರಲ್ಲಿ ಐ ಬ್ಯಾಂಕ್ ಶುರು ಮಾಡಿದ್ರೆ ಹೆಚ್ಚು ಜನರು ಕಣ್ಣಿನದಾನಕ್ಕೆ ಮುಂದಾಗುತ್ತಾರೆ. ಜನ ಜಾಗೃತಿಯಾಗುತ್ತೆ ಅನ್ನೋ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಐ ಬ್ಯಾಂಕ್ ಶುರು ಮಾಡುವ ಪ್ಲಾನ್ ಗೆ ಮುಂದಾಗಿದೆ. ಈ ಬಗ್ಗೆ ರಾಜಕುಮಾರ್ ಐ ಬ್ಯಾಂಕ್ ಸಂಘಟನೆಯಿಂದಲೂ ಸರ್ಕಾರಕ್ಕೆ ಮನವಿ ಕೇಳಿ ಬಂದಿದೆ.