ಜಯಪುರ: ಕೊಪ್ಪ ತಾಲೂಕಿನ ಶಾಂತಿಪುರ ನಿಡುವಾನೆ, ಎಲೆಮಡಲು ಗ್ರಾಮದ ಡೇವಿಡ್ ಕೆ ವಿ ಬಿನ್ ವರ್ಗಿಸ್ 37 ವರ್ಷ ಇವರು ಕಾಣೆಯಾಗಿದ್ದು ಜಯಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.5.5 ಅಡಿ ಎತ್ತರವಿದ್ದು ಸಾಧಾರಣ ಮೈಕಟ್ಟು ಎಣ್ಣೆಗಪ್ಪು ಬಣ್ಣ ಹೊಂದಿದ್ದಾರೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕನ್ನಡ, ತುಳು, ತಮಿಳು,ಮಲಿಯಾಳಿ ಭಾಷೆ ಮಾತನಾಡುತ್ತಿದ್ದರು ಎನ್ನಲಾಗಿದೆ.ಇವರ ಸುಳಿವು ಸಿಕ್ಕಲ್ಲಿ ಜಯಪುರ ಪೋಲಿಸ್ ಠಾಣೆ ಸಂಖ್ಯೆ 9480805172 ನಂಬರಿಗೆ ಕರೆಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.




