Oplus_131072

ಜೆ ಸಿ ಐ ಶಿವಮೊಗ್ಗ ರಾಯಲ್ಸ್ ಘಟಕದ ನೇತೃತ್ವದಲ್ಲಿ ಮತ್ತು ಶಿವಮೊಗ್ಗದ ಎಲ್ಲಾ ಜೆಸಿ ಘಟಕಗಳ ಸಹಕಾರದೊಂದಿಗೆ, ದಿನಾಂಕ 24 ಮೇ 2024 ರಂದು ರಾಷ್ಟ್ರೀಯ ತರಬೇತಿ ದಿನದ ಅಂಗವಾಗಿ ಸತತ 24 ಗಂಟೆಗಳ, 24 ವಿಷಯಗಳ, 24 ತರಬೇತುದಾರರನ್ನು ಒಳಗೊಂಡ, ತರಬೇತಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ನ್ಯಾಷನಲ್ ಗ್ಲೋಬಲ್ ವರ್ಲ್ಡ್ ರೇಕಾರ್ಡ್ ಸಂಸ್ಥೆಯು ಗುರುತಿಸಿ ವಿಶ್ವದಾಖಲೆಯ ನೋಬೆಲ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಗೊಳಿಸುವ ಮೂಲಕ ನ್ಯಾಷನಲ್ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಸರ್ಟಿಫಿಕೇಟ್ ಅನ್ನು ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕ ಮತ್ತು ಶಿವಮೊಗ್ಗದ ಎಲ್ಲಾ ಜೆಸಿಐ ಸಂಸ್ಥೆ ಪರವಾಗಿ ಈ ವರ್ಲ್ಡ್ ರೆಕಾರ್ಡ್ ಸರ್ಟಿಫಿಕೇಟ್ ಅನ್ನು ನೀಡಿದೆ. ಈ ಕಾರ್ಯಕ್ರಮದಲ್ಲಿ ಜೆ ಸಿ ಐ ಶಿವಮೊಗ್ಗ ರಾಯಲ್ಸ್ ಘಟಕದ ಅಧ್ಯಕ್ಷರಾದ ಸುದರ್ಶನ್ ತಾಯಿಮನೆ, ಮೋಹನ್ ಕಲ್ಪತರು, ರಾಷ್ಟ್ರೀಯ ತರಬೇತುದಾರರಾದ ಗೌರೀಶ್ ಭಾರ್ಗವ್, ವಲಯ ತರಬೇತುದಾರರಾದ ಪ್ರಮೋದ್ ಶಾಸ್ತ್ರಿ, ಉದ್ಯಮಿ ಉದಯ್ ಕದಂಬ, ನವೀನ್ ತಲಾರಿ, ಆದರ್ಶ್, ನರಸಿಂಹಮೂರ್ತಿ, ಅನುಷ್, ಶ್ರೀಧರ್, ಶೋಭಾ ಸತೀಶ್, ಗಾನವಿ, ಸ್ಮಿತಾ ಮೋಹನ್, ವಿನೋದ್ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *