- ಈ ಬದಲಾವಣೆಯಾಗಿದ್ದು ಯಾಕೆ ಗೊತ್ತಾ
ಶಬರಿಮಲೆಯಲ್ಲಿ ಭಕ್ತರ ಆಗಮನ ಹೆಚ್ಚಾಗಿದ್ದು , ತೊಂದರೆಯಾಗದಂತೆ ತಡೆಯಲು ಕೇರಳ ಸರ್ಕಾರ ಹೊಸ ಕ್ರಮ ಕೈಗೊಂಡಿದೆ. ಭಕ್ತರು ಇನ್ಮುಂದೆ ದರ್ಶನಕ್ಕಾಗಿ ಕಡ್ಡಾಯವಾಗಿ ಮುಂಗಡ ಆನ್ಲೈನ್ ಬುಕ್ಕಿಂಗ್ ಮಾಡಿಕೊಳ್ಳಬೇಕಿದೆ. ಈ ಹಿಂದೆ ಇದ್ದ ಸ್ಟಾಟ್ ಬುಕ್ಕಿಂಗ್ ವ್ಯವಸ್ಥೆ ಇನ್ಮುಂದೆ ಇರುವುದಿಲ್ಲ ಎಂದು ತಿಳಿಸಿದೆ.

ಈ ಬಗ್ಗೆ ಸಚಿವ ವಿ.ಎನ್. ವಾಸವನ್ ಮಾತನಾಡಿದ್ದು, ಈ ವರ್ಷ ಶಬರಿಮಲೆ ಯಾತ್ರಾರ್ಥಿಗಳಿಗೆ ಸ್ಪಾಟ್ ಬುಕ್ಕಿಂಗ್ ಇರುವುದಿಲ್ಲ. ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಮುಂಗಡವಾಗಿಯೇ ಬುಕ್ಕಿಂಗ್ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.






