- ಆರಂಭಿಕ ತಯಾರಿ ಹೇಗೆ?
- ಕಸಿ ಗೇರುಗಿಡ ನಾಟಿಕ್ರಮದ ಬಗ್ಗೆ ಇಲ್ಲಿದೆ ಡೀಟೇಲ್ಸ್

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಾಧ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಹ ಸಂಘ ಸಂಸ್ಥೆಗಳಿಂದ ರೈತರಿಗೆ ಉಚಿತ ಗೇರು (ತಳಿಗಳು ಉಳ್ಳಾಲ -3 ಮತ್ತು ಭಾಸ್ಕರ )ಗಿಡಗಳನ್ನು ವಿತರಣೆ ಮಾಡಲಾಯಿತು.ಜೊತೆಗೆ ವಾರದಿಂದಲೇ ರೈತರಿಗೆ ಗೇರು ಗಿಡದ ಬಗ್ಗೆ ತರಬೇತಿ ಕಾರ್ಯಕ್ರಮ ನೀಡಿದ್ದು,

ಅಕ್ಟೋಬರ್ 17ರಂದು ಗೇರು ಗಿಡಗಳನ್ನು ರೈತರಿಗೆ ತಲುಪಿಸಲಾಯಿತು.ಈ ವೇಳೆ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಕೃಷಿ ವಿಭಾಗದ ಯೋಜನಾಧಿಕಾರಿ ಸುಧೀರ್ ಜೈನ, ಹಾಗೂ ಗೇರು ಗಿಡ ಪೂರೈಸಿದ ನವನಿತಾ ನರ್ಸರಿ ಪುತ್ತೂರು ಇದರ ಮಾಲೀಕರಾದ ವೇಣುಗೋಪಾಲ್, ಯೋಜನಾಧಿಕಾರಿ ಮಾಲತಿ ದಿನೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಸಿ ಗೇರು ಗಿಡ ನಾಟಿಕ್ರಮ
- ಕಸಿ ಕಟ್ಟಿದ ಭಾಗದಲ್ಲಿ ಸುತ್ತಿದ ಪ್ಲಾಸ್ಟಿಕ್ ಹೊದಿಕೆಯ ಗಂಟನ್ನು ಹರಿತವಾದ ಬ್ಲೆಡ್ ನಿಂದ ತುಂಡರಿಸಿ ಇಲ್ಲದಿದ್ದಲ್ಲಿ ಕಾಂಡವು ಬೆಳೆದು ಗಿಡಕ್ಕೆ ಹಾನಿಯಾಗುತ್ತದೆ.ಗಂಟನ್ನು ಕತ್ತರಿಸಿದ ನಂತರ ಪ್ಲಾಸ್ಟಿಕ್ ಹೊದಿಕೆಯು ಕಾಂಡ ಬೆಳೆದಂತೆ ಸಡಿಲವಾಗಿ ಬೀಳುತ್ತದೆ.
- ಗೇರು ಸಸಿಗಳ ಬೇರಿಗೆ ಹಾನಿಯಗದಂತೆ ಜಾಗ್ರತೆಯಿಂದ ಪ್ಲಾಸ್ಟಿಕ್ ಕವರನ್ನು ಹರಿದು ಗಿಡವನ್ನು ಗುಂಡಿಯ ಮದ್ಯ ಭಾಗದಲ್ಲಿ ಇಟ್ಟು ಮಣ್ಣಿನಿಂದ ಮುಚ್ಚಿ ನೆಡಬೇಕು
- ಗಿಡ ನೆಡುವ ಮುನ್ನ ಗುಂಡಿಯನ್ನು ಸಡಿಲವಾದ ಮಣ್ಣಿನಿಂದ ಅರ್ಧದಿಂದ ಮುಕ್ಕಾಲು ಭಾಗದಷ್ಟು ಮುಚ್ಚಿರಿ
- ಗಿಡ ನೆಡುವಾಗ ಕಸಿ ಜೋಡಣೆಯ ಭಾಗವು ಮಣ್ಣಿನೊಳಕ್ಕೆ ಸೇರದೇ ನೆಲದಿಂದ ಕನಿಷ್ಠ 5 ಸೆ ಮೀ ಮೆಲ್ಬಾಗದಲ್ಲಿರುವಂತೆ ನೋಡಿಕೊಳ್ಳಿ
- ಕಸಿ ಭಾಗದ ಗಾಯವು ಸಂಪೂರ್ಣವಾಗಿ ಒಣಗಿ ಕೂಡಿಕೊಂಡಿದ್ದಲ್ಲಿ ಗಿಡವನ್ನು ಸ್ವಲ್ಪ ಆಳಕ್ಕೆ ನೆಟ್ಟಲ್ಲಿ ಗಿಡಗಳು ಗಾಳಿಗೆ ಅಲುಗಾಡದಂತೆ ಅಥವಾ ಕಿತ್ತು ಬರದಂತೆಯು ತಡೆಯ ಬಹುದು
- ನಂತರ ಗಾಳಿಯ ಹೊಡೆತಕ್ಕೆ ಗಿಡವು ಅಲುಗಾಡಿ ತುಂಡಾಗದಂತೆ ಗಿಡಕ್ಕೆ ಅಧಾರವಾಗಿ ಊರುಗೋಲನ್ನು ಗಿಡದ ಬೇರಿಗೆ ಪೆಟ್ಟಾಗದಂತೆ ನೆಟ್ಟು ಅದಕ್ಕೆ ಗಿಡವನ್ನು ಸಡಿಲವಾಗಿ ಕಟ್ಟಬೇಕು
- ಗಿಡದ ಕಸಿ ಸೇರುವಿಕೆಯ ಕೆಳಗಿನ ಭಾಗದಲ್ಲಿ ಕಾಣಿಸುವ ಚಿಗುರುಗಳನ್ನು ಬುಡದಿಂದಲೇ ಆಗಾಗ ಚಿವುಟಿ. ಇಲ್ಲವಾದಲ್ಲಿ ಗುರುತಿಲ್ಲದಿರುವ ಬುಡ ಭಾಗದ ಸಸಿಯ ಚಿಗುರು ಬೆಳೆದು ಕಸಿ ಗಿಡದ ಭಾಗ ಸತ್ತು ಹೋಗಬಹುದು








