- ಮಾಜಿ ಸೈನಿಕ ಎಸ್ ಪಿ ಪ್ರದೀಪ್ ಸಾಮಾಜಿಕ ಕಳಕಳಿಗೆ ಸಾರ್ವಜನಿಕರ ಮೆಚ್ಚುಗೆ
- ನಿವೃತ್ತ ಶಿಕ್ಷಕರಾದ ಪಡುವಳ್ಳಿ ಕಿಟ್ಟಪ್ಪನವರಿಂದ ಉದ್ಘಾಟನೆ

ತೀರ್ಥಹಳ್ಳಿ ತಾಲೂಕಿನ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರೂರು ಗ್ರಾಮದ ದನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಎಸ್ ,ಸ್ಪಿ, ಪ್ರದೀಪ್ ಮಾಜಿ ಸೈನಿಕರು ಎನ್ ಎಸ್ ಜಿ ಕಮಾಂಡೋ ಸ್ವಂತ ಹಣದಲ್ಲಿ ನಿರ್ಮಿಸಿದ್ದು ,ಇದರ ಉದ್ಘಾಟನೆಯನ್ನು ಗ್ರಾಮದ ನಿವೃತ್ತ ಶಿಕ್ಷಕರಾದ ಪಡುವಳ್ಳಿ ಕಿಟ್ಟಪ್ಪನವರು ಉದ್ಘಾಟಿಸಿದರು. ಇವರ ಪೂಜ್ಯ ತಾಯಿಯವರಾದ ಎ o,ಎ ,ರಾಧಮ್ಮ ಮೇಗರವಳ್ಳಿ ದೊಡ್ಮನೆ ಹೆಗಡೆ ಕುಟುಂಬ ಹಾಗೂ ದಿವಂಗತ ಎಂ,ಎ, ರಾಜೀವಿ ಹೊನ್ನಗುಂಡಿ ಮತ್ತು ದಿವಂಗತ ವೇದಾಕ್ಷಿ ಕೆಳಗಿನ ಕೊಪ್ಪ ಇವರ ಸ್ಮರಣಾರ್ಥವಾಗಿ ಕಾಮಧೇನು ನೀರಿನ ಟ್ಯಾಂಕ್ ನಿರ್ಮಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಹಿರಿಯರಾದ ಶಿರೂರು ಚಂದ್ರಪ್ಪ ಗೌಡ ಎಸ್ .ಎ ,ಯುವ ಮುಖಂಡ ಪಡುವಳ್ಳಿ ಹರ್ಷೇಂದ್ರ ಕುಮಾರ್, ಶಿರೂರು ದಿನೇಶ್, ದರೆಮನೆ ನಾಗೇಶ್, ಶೀರೂರು ದರ್ಶನ್, ಬೆಂಥ್ಲ ಉಮೇಶ್, ಶಿರೂರು ಚೇತನ್, ಆಂದಿನ ವಿಜ್ಞೇಶ್, ಅಂದಿನಿ ಪ್ರಸನ್ನ, ಕೃಷ್ಣಪ್ಪಗೌಡ, ಅಂದಿನಿ ಅಂಕಿತ್ ಗೌಡ, ಜಾವಗಲ್ ರಾಮಸ್ವಾಮಿ, ಶಿರೂರು ವಿಶ್ವನಾಥ್ ಗ್ರಾಮಸ್ಥರು ಉಪಸ್ಥಿತರಿದ್ದರು.
