- ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದ ಭಕ್ತ ಸಮೂಹ
- ಊರಿನ ಮುತೈದೆಯರಿಗೆ ಭಾಗಿನ ಕೊಟ್ಟು ಗೌರವ

*ತೀರ್ಥಹಳ್ಳಿ* ತಾಲೂಕಿನ ಮಳಲೂರು ಗ್ರಾಮ ಮೇಕೆರಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಮಲ್ಲಿಕಾರ್ಜುನ ದೇವಿ ದೇವಸ್ಥಾನದ 9 ದಿನಗಳ ನವರಾತ್ರಿ ಉತ್ಸವ 15 -10-2023 ಭಾನುವಾರದಿಂದ 24 -10 -2018 ಮಂಗಳವಾರ ತನಕ ದೇವಳದಲ್ಲಿ ವಿಶೇಷ ಪೂಜೆ,ಪಾರಾಯಣ ಹಾಗೂ ಭಜನೆ, ಚಂಡಿಕಾ ಹೋಮ ಮತ್ತು ವಿಜಯದಶಮಿ ಎಂದು ಎಲ್ಲಾ ಗ್ರಾಮದ ಮುತೈದೆ ರಿಗೆ ಬಾಗಿನ ನೀಡಲಾಯಿತು.ಈ ಧಾರ್ಮಿಕ ಕಾರ್ಯಕ್ರಮಕ್ಕೆ ಮಳಲೂರು ಗ್ರಾಮ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಿಂದ ದೇವರ ಕೃಪೆಯ ಪಾತ್ರರಾಗಲು ಭಕ್ತರ ದಂಡು ಸೇರಿತ್ತು.

ಈ ಎಲ್ಲಾ ಕಾರ್ಯಕ್ರಮಗಳು ವೇದಬ್ರಹ್ಮ ಶ್ರೀ ಗಣೇಶ ಮೂರ್ತಿ ನಾವಡ (ಪುರೋಹಿತರು ಶ್ರೀ ಗುರು ನರಸಿಂಹ ಧಾರ್ಮಿಕ ಮಂದಿರ ಕುಂಚುರು ರಸ್ತೆ ಹುಲ್ಮಕ್ಕಿ )ಇವರ ನೇತೃತ್ವದಲ್ಲಿ ನಡೆಯಿತು.
ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದ ಎಲ್ಲಾ ಭಕ್ತಗಣಕ್ಕೆ ಅಧ್ಯಕ್ಷರು ಮತ್ತು ಸದಸ್ಯರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೇಕೆರಿ – ಮಳಲೂರು ಧನ್ಯವಾದ ತಿಳಿಸಿದ್ದಾರೆ.