ತೀರ್ಥಹಳ್ಳಿ : ಮಂಗಳವಾರ ಮಧ್ಯಾಹ್ನ 3:30 ರ ಸಮಯದಲ್ಲಿ ಏಕಾಏಕಿ ತುಂಗಾ ನದಿಯ ತುಂಗಾ ಕಮಾನು ಸೇತುವೆ ಸಮೀಪದಲ್ಲಿ ಮೃತದೇಹವೊಂದು ತೇಲಿ ಬಂದಿದ್ದು ಸ್ಥಳೀಯರು ನೋಡಿ ವಿಷಯ ತಿಳಿಸಿದ್ದಾರೆ.ಮೃತದೇಹವನ್ನು ಅಪರಿಚಿತ ಶವ ಎಂದು ಹೇಳಲಾಗಿದ್ದು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವ್ಯಕ್ತಿ ಪರಿಚಯ ಹಾಗೂ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.









