- ಯಾವಾಗ ಬರ್ತಾರೆ ಸುನೀತಾ ವಿಲಿಯಮ್ಸ್ ಹಾಗೂ ಸಹ ಗಗನಯಾತ್ರಿ
ಬಾಹ್ಯಾಕಾಶದಲ್ಲಿ ಸಿಲುಕಿರುವ ಸುನೀತಾ ವಿಲಿಯಮ್ಸ್ ಪ್ರಯಾಣಿಸಿದ್ದ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ವಾಪಸಾತಿ ವಿಳಂಬವಾಗುತ್ತಿದೆ. 2025ರ ಫೆಬ್ರವರಿ ವೇಳೆಗೆ ಅವರನ್ನು ಮರಳಿ ಕರೆ ತರುವ ಪ್ರಯತ್ನ ಮುಂದುವರಿದಿದೆ ಎನ್ನಲಾಗುತ್ತಿದ್ದು. ಈ ವೇಳೆ ತಮ್ಮ ಅನನ್ಯ ಅನುಭವಗಳ ಬಾಹ್ಯಾಕಾಶವನ್ನು ಅನ್ವೇಷಿಸಲು ಈ ಸಮಯವನ್ನು ಬಳಸುತ್ತಿದ್ದಾರೆ.ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಜೊತೆಗೆ ಸುನೀತಾ ವಿಲಿಯಮ್ಸ್ ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾರೆ. 24 ಗಂಟೆಗಳ ಒಳಗೆ ಬಹು ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ನೋಡುವ ಅವಕಾಶ ಸೇರಿದಂತೆ ಅದು ಹೇಗೆ ಸಂಭವಿಸುತ್ತದೆ ಎನ್ನುವ ಕುರಿತು ಅವರು ಅಧ್ಯಯನ ನಡೆಸುತ್ತಿದ್ದಾರೆ.ಬಾಹ್ಯಾಕಾಶದಲ್ಲಿ ಒಂದು ದಿನದಲ್ಲಿ ಸುಮಾರು 12 ಗಂಟೆಗಳ ಬೆಳಕು ಮತ್ತು 12 ಗಂಟೆಗಳ ಕತ್ತಲೆಯಾಗಿರುತ್ತದೆ. ಗಗನಯಾತ್ರಿಗಳು ತಮ್ಮ ದಿನಚರಿಯಲ್ಲಿ ಪದೇಪದೇ 45 ನಿಮಿಷಗಳ ಹಗಲು ಮತ್ತು 45 ನಿಮಿಷಗಳ ಕತ್ತಲೆಯನ್ನು ಅನುಭವಿಸುತ್ತಾರೆ. ಇದು ಭೂಮಿಯ ದಿನಚರಿಗೆ ಹೋಲಿಸಿದರೆ ದಿನದಲ್ಲಿ 16 ಬಾರಿ ಸಂಭವಿಸುತ್ತದೆ. ಎಂಬ ಅಚ್ಚರಿಯನ್ನು ತಿಳಿಸಿದ್ದಾರೆ.











