• ಎಸ್ ಬಂಗಾರಪ್ಪ ರವರು ಎಂದೂ ಅಮರ

ಕರುನಾಡು ಕಂಡ ಧೀಮಂತ ನಾಯಕ, ಸಮಾಜವಾದಿ ಮಾಜಿ ಮುಖ್ಯ ಮಂತ್ರಿ ಎಸ್ ಬಂಗಾರಪ್ಪ ನವರ ಜನ್ಮದಿನದ ಶುಭ ದಿನವಿಂದು.

ಆಶ್ರಯ, ಅಕ್ಷರ, ಅರಾಧನ, ಅಕ್ಷರ ವಿಶ್ವ ದಂತಹ ಪಂಚ ಯೋಜನೆಗಳನ್ನು ನೀಡಿ ಬಡವರ ಜೀವನಕ್ಕೆ ಆಧಾರವಾದ ಕನಸುಗಾರ.ರೈತರ ಸಂಕಟಗಳ ಬಗ್ಗೆ ಅರಿವಿದ್ದ ಬಂಗಾರಪ್ಪನವರು ಉಚಿತ ಕೃಷಿ ಪಂಪ್ ಸೆಟ್ ನೀಡಿದ್ದು ಐತಿಹಾಸಿಕ ಮಹತ್ವದ ಸಂಗತಿ. ರೈತರ ಬಾಳಿಗೆ ನಿಜವಾದ ಬಂಗಾರದ ಯುಗ ಅಂದು ಆರಂಭವಾಗಿತ್ತು. ನಿರುದ್ಯೋಗಿ ಗ್ರಾಮೀಣ ಯುವಕರಿಗೆ ಗ್ರಾಮೀಣ ಕೃಪಾಂಕ ನೀಡಿ ಇಡೀ ಭಾರತವೇ ಬಂಗಾರಪ್ಪನವರ ಯೋಜನೆಗಳನ್ನು ತಿರುಗಿ ನೋಡುವಂತೆ ಮಾಡಿದ್ದರು. ಕನ್ನಡಿಗರಿಗೆ ಕನ್ನಡ ಮಾಧ್ಯಮ ವಿನಾಯಿತಿ ನೀಡಿ ದೇಶದ ಭಾಷಾವಾರು ಪ್ರಾಂತ್ಯಗಳಿಗೆ ಮಾದರಿಯಾದರು.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದೆ ಸುಗ್ರೀವಾಜ್ಞೆ ಹೊರಡಿಸಿದ್ದು ಕರುನಾಡ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಇತಿಹಾಸ ಅವರದ್ದು.ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದೆ ಸುಗ್ರೀವಾಜ್ಞೆ ಹೊರಡಿಸಿದ್ದು ಕರುನಾಡ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಇತಿಹಾಸ ಅವರದ್ದು.

ದೇವಸ್ಥಾನಗಳಿಗೆ ಕೆಲವರಿಗೆ ಹೋಗಲು ಸಹ ಅನುಮತಿ ಇರದಿದ್ದ ಕಾಲದಲ್ಲಿ ತಮಗೆ ಬೇಕಾದಂತೆ ದೇವಸ್ಥಾನ ಕಟ್ಟಿಕೊಳ್ಳಲು ಧನಸಹಾಯ ಘೋಷಿಸಿ ಧೀಮಂತ ನಾಯಕ.ಸಮಾಜದಲ್ಲಿ ಈಡಿಗರ ನಿಲುವನ್ನು ಎತ್ತಿ ಹಿಡಿದವರಲ್ಲಿ ಮುಂಚೂಣಿಯಲ್ಲಿದ್ದವರು ಸಾರೆ ಕೊಪ್ಪ ದ ನಮ್ಮೆಲ್ಲರ ಮೆಚ್ಚಿನ ನಾಯಕ ಧ್ರುವತಾರೆ ಎಸ್ ಬಂಗಾರಪ್ಪಜಿಯವರು.

ವರದಿ :ಅರುಣ್ ಮಂಜುನಾಥ್

Leave a Reply

Your email address will not be published. Required fields are marked *