ಗ್ಯಾರಂಟಿ ಅನುಷ್ಠಾನ ಪ್ರಧಿಕಾರದ ಹೋಬಳಿ ಮಟ್ಟದ ಪ್ರಗತಿ ಪರಿಶೀಲನ ಸಭೆ 9.12.24 ಮತ್ತು 10.12.24ರಂದು ಬೆಜ್ಜವಳ್ಳಿ,ಕೋಣಂದೂರು , ಹೊಸಳ್ಳಿ ಹಾಗೂ ಬಸವಾನಿಯಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ನಾಬಳ ಶಚಿಂದ್ರ ಹೆಗ್ಡೆ ನೇತೃತ್ವ ದಲ್ಲಿ ನೆಡೆಯಿತು,ಜಿಲ್ಲೆಯಲ್ಲಿಯೇ ತೀರ್ಥಹಳ್ಳಿ ತಾಲೂಕಿನಲ್ಲಿ ಪ್ರಥಮವಾಗಿ ಹೊಬಳಿ ಮಟ್ಟದಲ್ಲಿ ಪ್ರಗತಿ ಪರಿಶೀಲನ ಸಭೆ ನೆಡೆಯಿತು, ಈ ಸಭೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು, ಇ ಓ , ಸಿಡಿಪಿಒ, ನ್ಯಾಯಬೆಲೆ ಅಂಗಡಿಯವರು, ಅಂಘನವಾಡಿ ಕಾರ್ಯಕರ್ತೆಯರು,ಪಿ ಡಿ ಓಗಳು ಕೆ ಪಿ ಟಿ ಸಿ ಎಲ್ ಅಧಿಕಾರಿಗಳು, ಆಹಾರ ಅಧಿಕಾರಿಗಳು ಭಾಗವಹಿಸಿದ್ದರು,ಗ್ರಾಮಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸಹ ಪಾಲ್ಗೊಂಡಿದ್ದರು, ಫಲಾನುಭವಿಗಳು ಯೋಜಾನೆಯಿಂದ ತಮಗಾದ ಅನುಕೂಲವನ್ನು, ಸಂತಸದಿಂದ ಹಂಚಿಕೊಂಡರು, ಪಂಚ ಗ್ಯಾರೆಂಟಿಯಿಂದ ವಂಚಿದರಾದವರ ಅಹವಾಲುಗಳನ್ನ ಕೇಳಿ ಪರಿಹರಿಸುವ ಕೆಲಸ ಮಾಡಲಾಯಿತು

ಅಧ್ಯಕ್ಷರಾದ ಶಚಿಂದ್ರ ಹೆಗ್ಡೆ ಅಧಿಕಾರಿಗಳಿಗೆ ಈ ಯೋಜನೆ ಎಲ್ಲರಿಗೂ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು, ಗ್ಯಾರೆಂಟಿ ಪ್ರಾಧಿಕಾರದ ಸದಸ್ಯರುಗಳಾದ ರಾಘವೇಂದ್ರ ಶೆಟ್ಟಿ, ಹುಂಚದಕಟ್ಟೆ ಆದರ್ಶ, ಅಶ್ವಲ್ ಗೌಡ, ನಾಗೇಶ್ ನಾಯ್ಕ್, ಕಬಸೆ ವಿಕ್ರಂ, ಚಿಪ್ಪಿನ ಕೋಡಿಗೆ ವೆಂಕಟೇಶ್, ದಿಲೀಪ್ ಪತ್ರೊಳ್ಳಿ , ಸಯ್ಯದ್ ಯಾಸಿನ್,ಜಿಲ್ಲಾ ಸಮಿತಿ ಸದಸ್ಯರಾದ ಬಿ ಕೆ ಉದಯ ಕುಮಾರ್ ಭಾಗವಹಿಸಿದ್ದರು.ಗೃಹ ಲಕ್ಷ್ಮಿ 30.800ಮಹಿಳೆಯರಿಗೆ 6ಕೋಟಿ 16ಲಕ್ಷ, ಅನ್ನಭಾಗ್ಯ 29ಸಾವಿರ ಕುಟುಂಬಕ್ಕೆ 1ಕೋಟಿ 56ಲಕ್ಷ, ಗೃಹಜೋತಿ 34ಸಾವಿರ ಸ್ಥಾವರಕ್ಕೆ 1ಕೋಟಿ 60ಲಕ್ಷ, ಯುವ ನಿಧಿ 514ಜನರಿಗೆ 14ಲಕ್ಷ ಹೀಗೆ ತೀರ್ಥಹಳ್ಳಿ ತಾಲೂಕಿಗೆ ತಿಂಗಳಿಗೆ 10ಕೋಟಿಗೂ ಹೆಚ್ಚಿನ ಹಣ ಬರುತ್ತಿದೆ, ಶಕ್ತಿ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲು ಕೆ ಎಸ್ ಆರ್ ಟಿ ಸಿ ಡಿಪೋ ಮಂಜೂರು ಮಾಡಿಸಲು ಪ್ರಯತ್ನಮಾಡೋಣ ಎಂದು ಅಧ್ಯಕ್ಷರಾದ ನಾಬಳ ಸಚಿಂದ್ರ ಹೆಗ್ಡೆ ತಿಳಿಸಿದರು.






