Oplus_131072

ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ದುರಂತದಲ್ಲಿ ಹುತಾತ್ಮರಾದ ಕರ್ನಾಟಕದ ಸೈನಿಕರ ಪಾರ್ಥಿವ ಶರೀರಗಳು ಆಗಮಿಸಿದೆ.

ಜಮ್ಮುವಿನ ಕಾಶ್ಮೀರ್ ಪುಂಚ್‌ ಗಡಿ ರೇಖೆಯ ಬಳಿ ನಡೆದ ಸೇನಾವಾಹನ ದುರಂತದಲ್ಲಿ ಮರಾಠಾ ರೆಜಮೇಂಟ್‌ನ ಐವರು ಯೋಧರ ಹುತಾತ್ಮರ ಪೈಕಿ ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು ಬಿಜಾಡಿಯ ಯೋಧ ಅನೂಪ್ ಪೂಜಾರಿ (33) ಕೂಡ ಹುತಾತ್ಮರಾಗಿದ್ದಾರೆ.

Oplus_131072

ಬಾಗಲಕೋಟೆ ಯೋಧ ಮಹೇಶ್ ಮಾರಿಗೊಂಡ: ಜಮ್ಮು ಕಾಶ್ಮೀರದಲ್ಲಿ ಯೋಧರ ವಾಹನ ಪ್ರಪಾತಕ್ಕೆ ಬಿದ್ದ ಘಟನೆಯಲ್ಲಿ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರದ ಯೋಧ ಮಹೇಶ್ ನಾಗಪ್ಪ ಮಾರಿಗೊಂಡ (25) ಹುತಾತ್ಮರಾಗಿದ್ದಾರೆ. ಈ ಘಟನೆಯಲ್ಲಿ ಹುತಾತ್ಮರಾದ ಅತಿ ಚಿಕ್ಕ ವಯಸ್ಸಿನ ಯೋಧ ಇವರಾಗಿದ್ದಾರೆ. ಇವರು 11ನೇ ಮರಾಠಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 6 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಮಹೇಶ್ ಮಾರಿಗೊಂಡ ಅವರಿಗೆ ಕಳೆದ 3 ವರ್ಷಗಳ ಹಿಂದೆ ಮದುವೆಯಾಗಿತ್ತು. ಲಕ್ಷ್ಮೀ ಎಂಬ ಯುವತಿ ಮದುವೆಯಾಗಿದ್ದ ಮಹೇಶ್ ಇದೀಗ ಇಹಲೋಕ ತ್ಯಜಿಸಿದ್ದಾರೆ.

ಬೆಳಗಾವಿಯ ಸುಬೇದಾರ್ ದಯಾನಂದ ತಿರಕಣ್ಣವರ: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿರೇಖೆ ಬಳಿ ಭೂಕುಸಿತದ ವೇಳೆ ಹುತಾತ್ಮರಾದ ಯೋಧರ ಪೈಕಿ ಬೆಳಗಾವಿ ತಾಲೂಕಿನ ಸಾಂಬ್ರಾ‌ ಗ್ರಾಮದ ಯೋಧ ದಯಾನಂದ ತಿರಕಣ್ಣವರ ಹುತಾತ್ಮರಾಗಿದ್ದಾರೆ. ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಯಾನಂದ ತಿರಕಣ್ಣವರ ಅವರು ಗಡಿ ರೇಖೆ ಬಳಿ ಗಸ್ತು ತಿರುಗುವಾಗ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

Leave a Reply

Your email address will not be published. Required fields are marked *